alex Certify ಊಟ ಮಾಡುವಾಗಲೇ ವ್ಯಕ್ತಿ ಹಠಾತ್ ಸಾವು: ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟ ಮಾಡುವಾಗಲೇ ವ್ಯಕ್ತಿ ಹಠಾತ್ ಸಾವು: ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch

50 ವರ್ಷ ವಯಸ್ಸಿನ ಸಂಜಯ್ ವರ್ಮಾ ಎಂಬವರು ಭಾನುವಾರ ಸಂಜೆ 7 ಗಂಟೆಗೆ ಉತ್ತರ ಪ್ರದೇಶದ ಆಗ್ರಾದ ಸಿಕಂದರದಲ್ಲಿರುವ ಭಗವತಿ ಡಾಬಾದಲ್ಲಿ ಆಹಾರ ಸೇವಿಸುವಾಗ ಹಠಾತ್‌ ಸಾವಿಗೀಡಾಗಿದ್ದಾರೆ. ಅವರು ಕೈಲಾಶ್ ವಿಹಾರ್‌ನ ಸಾಯಿ ಕ್ಲಾಸಿಕ್ ಕಾಲೋನಿಯ ನಿವಾಸಿಯಾಗಿದ್ದು, ಸಾವಿನ ಕೊನೆ ಕ್ಷಣಗಳ ವಿಡಿಯೋ ಡಾಬಾದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಡಾಬಾಗೆ ಭೇಟಿ ನೀಡಿದ ಸಂಜಯ್ ವರ್ಮಾ ಅವರು ಚೀಸ್ ಕರಿ ಮತ್ತು ರೊಟ್ಟಿಗೆ ಆರ್ಡರ್ ಮಾಡಿದ್ದರು. ಅರ್ಧ ರೊಟ್ಟಿಯನ್ನು ಮಾತ್ರ ತಿನ್ನಲು ಸಾಧ್ಯವಾಗಿದ್ದು, ಇದ್ದಕ್ಕಿದ್ದಂತೆ ಕುರ್ಚಿಯ ಮೇಲೆ ಒಂದು ಬದಿಗೆ ಉರುಳಿದ್ದರು. ಡಾಬಾ ಸಿಬ್ಬಂದಿ ಮತ್ತು ಮಾಲೀಕರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಂಜಯ್ ವರ್ಮಾ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಲ್ಲಿನ ವೈದ್ಯರು ಅವರು ಈಗಾಗಲೇ ನಿಧನರಾಗಿದ್ದಾರೆ ಎಂದು ಘೋಷಿಸಿದರು.

ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಪ್ರಾಥಮಿಕವಾಗಿ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸಂಜಯ್ ವರ್ಮಾ ಅವರು ಸಿಕಂದರ ತರಕಾರಿ ಮಾರುಕಟ್ಟೆಯಲ್ಲಿ ಡೀಲರ್ ಆಗಿದ್ದರು. ಸಂಜಯ್ ವರ್ಮಾ ಅವರ ಅಕಾಲಿಕ ನಿಧನವು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಆಘಾತವನ್ನುಂಟು ಮಾಡಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮಾತ್ರ ಸಾವಿನ ನಿಖರವಾದ ಕಾರಣ ತಿಳಿಯಲಿದೆ.

— Naseem Ahmad Journalist NDTV (@NaseemNdtv) December 15, 2024

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...