ತುಮಕೂರು: ಕೆಮ್ಮಿನ ಔಷಧ ಎಂದು ತಿಳಿದು ಕೀಟನಾಶಕ ಸೇವಿಸಿದ್ದ ರೈತರೊಬ್ಬರು ಮೃತಪಟ್ಟ ಘಟನೆ ಹುಳಿಯಾರು ಹೋಬಳಿ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ನಿಂಗಪ್ಪ(65) ಮೃತಪಟ್ಟವರು. ರಾತ್ರಿ ಕೆಮ್ಮು ಬಂದಿದ್ದರಿಂದ ಕೆಮ್ಮಿನ ಔಷದ ಎಂದು ತಿಳಿದು ಮನೆಯಲ್ಲಿದ್ದ ಕೀಟನಾಶಕ ಸೇವಿಸಿದ್ದಾರೆ. ನಂತರ ಅವರಿಗೆ ಅದು ಕೀಟನಾಶಕ ಎಂದು ಗೊತ್ತಾಗಿದ್ದು, ಮಕ್ಕಳಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಂಗಪ್ಪ ಮೃತಪಟ್ಟಿದ್ದಾರೆ ಎನ್ನಲಾಗಿದೆ.