alex Certify ಮಗಳ ಮದುವೆ ಹಾಲ್ ನಲ್ಲೇ ಆಕೆಯ ತಿಥಿ ಕಾರ್ಡ್ ಹಂಚಿದ ತಂದೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಮದುವೆ ಹಾಲ್ ನಲ್ಲೇ ಆಕೆಯ ತಿಥಿ ಕಾರ್ಡ್ ಹಂಚಿದ ತಂದೆ!

ತಂದೆ-ತಾಯಿ ಕಷ್ಟಪಟ್ಟು ವಿದ್ಯಾಭ್ಯಾಸ ಕಲುಷಿ, ಮಗಳು ತನ್ನ ಕಾಲಮೇಲೆ ತಾನು ನಿಲ್ಲಲೆಂದು ಚನ್ನಾಗಿ ಓದಿಸುತ್ತಿದ್ದರೆ ಪ್ರೀತಿ-ಪ್ರೇಮ ಎಂದು ಪೋಷಕರ ಆಸೆಗೆ ತಣ್ಣೀರೆರಚಿ ಬೇರೆ ಯುವಕನನ್ನು ಮಗಳು ಮದುವೆಯಾಗುತ್ತಿದ್ದಂತೆ ನೊಂದ ತಂದೆ ಮದುವೆ ಹಾಲ್ ನಲ್ಲೇ ತಿಥಿ ಕಾರ್ಡ್ ಹಂಚಿರುವ ಘಟನೆ ನಡೆದಿದೆ.

ಮಗಳು ಬಿ.ಇಡಿ ಓದಬೇಕು, ಬಳಿಕ ಶಿಕ್ಷಕಿಯಾಗಬೇಕು ಎಂದು ನೂರಾರು ಕನಸು ಹೊತ್ತು ಕಷ್ಟಪಟ್ಟು ಮಗಳನ್ನು ಓದಿಸಿದ್ದರು. ಆದರೆ ಓದುತ್ತಿದ್ದ ವೇಳೆಯೇ ಮಗಳು ಯುವಕನೊಬ್ಬನನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಾಳೆ.

ಮಗಳ ನಿರ್ಧಾರಕ್ಕೆ ಬೇಸತ್ತ ತಂದೆಯೊಬ್ಬರು ಆಕೆಯ ಮದುವೆ ಹಾಲ್‌ನಲ್ಲೇ ತಿಥಿ ಕಾರ್ಡ್ ಹಂಚಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಬೇವಾರ್‌ನಲ್ಲಿ ನೆಲೆಸಿರುವ ತಂದೆಯೊಬ್ಬರು ತಮ್ಮ ಮಗಳ ಹೆಸರಿನಲ್ಲಿ ಇಂಥದ್ದೊಂದು ಕಾರ್ಡ್ ಮುದ್ರಿಸಿದ್ದು ಭಾರಿ ವೈರಲ್ ಆಗಿದೆ.

ತಮ್ಮ ಇಚ್ಛೆಗೆ ವಿರುದ್ಧವಾಗಿ ಮಗಳು ತಾನು ಪ್ರೀತಿಸಿದ ಯುವಕನನ್ನು ವಿವಾಹವಾಗಿದ್ದಾರೆ. ಇದರಿಂದ ಆಕ್ರೋಶಗೊಂದ ತಂದೆ-ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದರು. ಅಲ್ಲದೇ ಮಗಳನ್ನು ತಮ್ಮ ಜೊತೆ ಕಳಿಸುವಂತೆಯೂ ಕೇಳಿದ್ದರು. ಆದರೆ ಪೊಲೀಸರು ಮಗಳು ವಿಮಲಾಳನ್ನು ಕರೆದು ವಿಚಾರಿಸಿದಾಗ ಪೊಲೀಸರ ಮುಂದೆ ಆಕೆ ತನ್ನ ಪೋಷಕರನ್ನು ಗುರುತೇ ಇಲ್ಲದಂತೆ ನಾಟಕವಾಡಿದ್ದಾಳೆ. ಅವರು ಯಾರು ಅನ್ನೋದೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಇದರಿಂದ ನೊಂದ ತಂದೆ ತನ್ನ ಜೀವಂತ ಮಗಳು ಸತ್ತಿದ್ದು, ಅವಳ ಶ್ರಾದ್ಧ ಕಾರ್ಯಕ್ಕೆ ಬನ್ನಿ ಎಂದು ಅವಳ ಮದುವೆಯ ದಿನವೇ ಮದುವೆ ಕಾರ್ಯಕ್ರಮದಲ್ಲಿ ತಿಥಿ ಕಾರ್ಡ್ ಹಂಚಿದ್ದಾರೆ.

ಯುವಕನನ್ನು ಪ್ರೀತಿಸಿದ್ದ ವಿಮಲಾ, ತಂದೆ-ತಾಯಿನ್ನು ಒಪ್ಪಿಸಿ ಮದುವೆಯಾಗುವುದನ್ನು ಬಿಟ್ಟು, ತಂದೆ-ತಾಯಿಯ ಗುರುತೇ ತನಗಿಲ್ಲ ಅವರು ಯಾರೆಂದೇ ಗೊತ್ತಿಲ್ಲ ಎಂದು ಉದ್ಧಟತನ ಮೆರೆದು ಮದುವೆಯಾಗಿದ್ದು, ಮಗಳ ನಿರ್ಧಾರಕ್ಕೆ ತಂದೆ ಇನ್ನಷ್ಟು ನಿಷ್ಠುರ ತೀರ್ಮಾನ ಕೈಗೊಂಡು ಮಗಳ ತಿಥಿ ಕಾರ್ಡ್ ಹಂಚಿದ್ದಾರೆ. ಪೊಲೀಸರ ಮುಂದೆ ತನ್ನ ಹೆತ್ತವರನ್ನು ಗುರುತಿಸಲು ನಿರಾಕರಿಸಿದ್ದಾಳೆ. ತಮ್ಮ ದುಃಖವನ್ನು ಸಂಬಂಧಿಕರೊಂದಿಗೆ ಹಂಚಿಕೊಂಡ ತಂದೆ ಬದುಕಿರುವ ಮಗಳು ನನ್ನ ಪಾಲಿಗೆ ಸತ್ತಳು ಎಂದು ತಿಥಿ ಕಾರ್ಡ್ ಮಾಡಿಸಿ ಹಂಚಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...