HomeEntertainmentBREAKING : ತೆಲುಗು ನಟ 'ಮೋಹನ್ ಬಾಬು'ಗೆ ಬಿಗ್ ಶಾಕ್ ; ಕೊಲೆ ಯತ್ನ ಪ್ರಕರಣ...

BREAKING : ತೆಲುಗು ನಟ ‘ಮೋಹನ್ ಬಾಬು’ಗೆ ಬಿಗ್ ಶಾಕ್ ; ಕೊಲೆ ಯತ್ನ ಪ್ರಕರಣ ದಾಖಲು |Actor Mohan Babu

ಹೈದರಾಬಾದ್ : ಮಂಗಳವಾರ ರಾತ್ರಿ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರಿಗೆ ಟಿವಿ ಮೈಕ್ ನಿಂದ ಪತ್ರಕರ್ತರೊಬ್ಬರಿಗೆ ಥಳಿಸಿದ ಹಿರಿಯ ನಟ ಮಂಚು ಮೋಹನ್ ಬಾಬು ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಸೆಕ್ಷನ್ ಬಿಎನ್ಎಸ್ 109 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಈ ಮೊದಲು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 118 (1) (ಅಪಾಯಕಾರಿ ಆಯುಧಗಳು ಅಥವಾ ವಸ್ತುಗಳನ್ನು ಬಳಸಿ ಗಾಯಗೊಳಿಸುವುದು) ಅಡಿಯಲ್ಲಿ ಪಹಾಡಿಶರೀಫ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದರ ನಡುವೆ ಕಾನೂನು ಅಭಿಪ್ರಾಯವನ್ನು ತೆಗೆದುಕೊಂಡು ಬಿಎನ್ಎಸ ಸೆಕ್ಷನ್ 109 ಅಡಿ ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

ಮೋಹನ್ ಬಾಬು ಅವರ ಕುಟುಂಬದಲ್ಲಿನ ಕಲಹದ ವಿಚಾರಕ್ಕೆ ಸಂಬಂಧಿಸಿದಂತೆ ಮೋಹನ್ ಬಾಬು ಅವರ ಪ್ರತಿಕ್ರಿಯೆ ಕೇಳಲು ಬಂದ ಸುದ್ದಿಗಾರನ ಮೇಲೆ ಮೋಹನ್ ಬಾಬು ಮೈಕ್ ಕಿತ್ತುಕೊಂಡು ಹಲ್ಲೆ ನಡೆಸಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular