HomeKarnatakaಕೆಎಎಸ್ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: 384 ಹುದ್ದೆಗಳ ನೇಮಕಾತಿಗೆ ಮಾರ್ಚ್ ಕೊನೆ ವಾರ ಮುಖ್ಯ ಪರೀಕ್ಷೆ

ಕೆಎಎಸ್ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: 384 ಹುದ್ದೆಗಳ ನೇಮಕಾತಿಗೆ ಮಾರ್ಚ್ ಕೊನೆ ವಾರ ಮುಖ್ಯ ಪರೀಕ್ಷೆ

ಬೆಂಗಳೂರು: 2025ರ ಮಾರ್ಚ್ ಕೊನೆ ವಾರ 384 ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ಮುಖ್ಯ ಪರೀಕ್ಷೆ ನಡೆಸಲು ಕರ್ನಾಟಕ ಲೋಕಾಸೇವಾ ಆಯೋಗ(KPSC) ಉದ್ದೇಶಿಸಿದೆ.

ಕೆಎಎಸ್ ಮುಖ್ಯ ಪರೀಕ್ಷೆ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಕಾಲಿಕ ದಿನಾಂಕಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಮಂಗಳವಾರ ಬಿಡುಗಡೆ ಮಾಡಿದ್ದು, ಮಾರ್ಚ್ 28, 29, ಏಪ್ರಿಲ್ 1 ಮತ್ತು 2 ರಂದು ಮುಖ್ಯ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಲೆಕ್ಕಪತ್ರ ಇಲಾಖೆಯ 15 ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ನೇಮಕಾತಿಗೆ ಜನವರಿ 21 ಮತ್ತು 27ರಂದು ಪರೀಕ್ಷೆ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂದುಳಿದ ವರ್ಗ ಕಲ್ಯಾಣ ಅಧಿಕಾರಿಗಳ 21 ಹುದ್ದೆಗಳಿಗೆ ಜನವರಿ 25ರಂದು ಪರೀಕ್ಷೆ ನಡೆಸಲಾಗುವುದು.

ಬಿಬಿಎಂಪಿ ಸಹಾಯಕ ಇಂಜಿನಿಯರ್ 95 ಹುದ್ದೆಗಳಿಗೆ ಜನವರಿ 31ರಂದು ಪರೀಕ್ಷೆ ನಡೆಯಲಿದೆ.

ಜಲಸಂಪನ್ಮೂಲ ಇಲಾಖೆಯ 90 ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಫೆಬ್ರವರಿ 16ರಂದು ಪರೀಕ್ಷೆ ನಡೆಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular