alex Certify ರೈತರಿಗೆ ಗುಡ್ ನ್ಯೂಸ್: ಬಗರ್ ಹುಕುಂ ಅರ್ಜಿ ತಿರಸ್ಕೃತವಾದಲ್ಲಿ ಪುನರ್ ಪರಿಶೀಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಬಗರ್ ಹುಕುಂ ಅರ್ಜಿ ತಿರಸ್ಕೃತವಾದಲ್ಲಿ ಪುನರ್ ಪರಿಶೀಲನೆ

ಬೆಳಗಾವಿ: ಬಗರ್ ಹುಕುಂ ಸಮಿತಿಗಳಲ್ಲಿ ತಿರಸ್ಕೃತಗೊಂಡ ನಮೂನೆ 57ರ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಪರಿಗಣಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿ, ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ನಮೂನೆ 50, 53, 57 ರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ನಮೂನೆ 57ರ ಅಡಿ ಸಲ್ಲಿಕೆಯಾದ ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ರಾಜ್ಯಾದ್ಯಂತ ತಿರಸ್ಕೃತಗೊಳಿಸಲಾಗಿದೆ. ಒಂದು ವೇಳೆ ರೈತರು ಇದರಿಂದ ಬಾಧಿತರಾಗಿದ್ದರೆ, ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಪ್ರಕರಣಗಳನ್ನು ಮರು ಪರಿಶೀಲಿಸುವಂತೆ ಉಪವಿಭಾಗಾಧಿಕಾರಿಗಳು ಸೂಚಿಸಿದರೆ, ಬಗರ್ ಹುಕುಂ ಸಮಿತಿಗಳಲ್ಲಿ ತಿರಸ್ಕೃತಗೊಂಡ ನಮೂನೆ 57ರ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...