HomeBusinessʼಆಪ್‌ʼ ಪ್ರಚಾರಕ್ಕೆ ಯುವಕರ ಬೆನ್ನ ಮೇಲೆ ಬಿಲ್‌ ಬೋರ್ಡ್‌; ನೆಟ್ಟಿಗರ ಆಕ್ರೋಶ

ʼಆಪ್‌ʼ ಪ್ರಚಾರಕ್ಕೆ ಯುವಕರ ಬೆನ್ನ ಮೇಲೆ ಬಿಲ್‌ ಬೋರ್ಡ್‌; ನೆಟ್ಟಿಗರ ಆಕ್ರೋಶ

ಬೆಂಗಳೂರಿನ ಬೀದಿಯಲ್ಲಿ ಆಹಾರ ವಿತರಣಾ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಲು ಕೆಲವರು ಜಾಹೀರಾತು ಫಲಕಗಳನ್ನು ಹೊತ್ತೊಯ್ಯುತ್ತಿರುವ ಫೋಟೋ ಆನ್‌ಲೈನ್‌ನಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.

ಆಹಾರ ವಿತರಣಾ ಅಪ್ಲಿಕೇಶನ್ ಪ್ರಚಾರ ಮಾಡಲು ಜಾಹೀರಾತು ಫಲಕಗಳನ್ನು ಹೊತ್ತುಕೊಂಡು ಬೆಂಗಳೂರಿನ ರಸ್ತೆಯೊಂದರಲ್ಲಿ ಕೆಲವರು ನಡೆದುಕೊಂಡು ಹೋಗುತ್ತಿರುವ ಫೋಟೋ ಆನ್‌ಲೈನ್‌ನಲ್ಲಿ ವೈರಲ್‌ ಆಗಿತ್ತು.

ರೋಷನ್ ಎಂಬ ಉದ್ಯಮಿ ಎಕ್ಸ್‌ನಲ್ಲಿ ಹಂಚಿಕೊಂಡ ಫೋಟೋ ಇದುವರೆಗೆ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದ್ದು, ಮಾರ್ಕೆಟಿಂಗ್ ತಂತ್ರದ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೋಶನ್ ತಮ್ಮ ಪೋಸ್ಟ್‌ನಲ್ಲಿ ಕಂಪನಿಯ ಜಾಹೀರಾತು ವಿಧಾನಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ, ವಿವಾದಾತ್ಮಕ ಮಾರ್ಕೆಟಿಂಗ್ ತಂತ್ರಕ್ಕೆ ನೆಟ್ಟಿಗರು ಕೂಡ ಆಕ್ರೋಶ ಹೊರ ಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular