ಬೆಂಗಳೂರು : 2025ನೇ ಸಾಲಿನ ಜನವರಿಯಿಂದ ಡಿಸೆಂಬರ್ ಮಾಹೆಯಲ್ಲಿ ಆಚರಿಸಬೇಕಾದ ಜಯಂತಿಗಳ ದಿನಾಂಕಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಡಿಸೆಂಬರ್ ಮಾಹೆಯಲ್ಲಿ ಆಚರಿಸಬೇಕಾದ ಜಯಂತಿಗಳ ದಿನಾಂಕಗಳ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಸದರಿ ಜಯಂತಿಗಳನ್ನು ಉಲ್ಲೇಖಿತ ಮಾರ್ಗಸೂಚಿಯನ್ವಯ ಆಚರಣೆ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕ್ರತಿ ನಿರ್ದೇಶನಾಲಯ ಪ್ರಕಟಣೆ ಹೊರಡಿಸಿದೆ.
ಜಯಂತಿ ಆಚರಣೆಗೆ ಮಾರ್ಗಸೂಚಿ ಪ್ರಕಟ
1. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಯಂತಿಗಳನ್ನು ಅರ್ಧ ಪೂರ್ಣವಾಗಿ ಆಚರಿಸುವುದು.
2. ಜಿಲ್ಲಾಧಿಕಾರಿಗಳು ಅಥವಾ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಯಾ ಜಯಂತಿಗೆ ಸಂಬಂಧಿಸಿದಂತೆ ಎಲ್ಲಾ ಸಮಾಜಗಳ ಮುಖಂಡರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಪೂರ್ವ ಸಿದ್ಧತೆ ಮಾಡಿಕೊಳ್ಳವುದು.
3. ಆಹ್ವಾನ ಪತ್ರಿಕೆ, ಕರಪತ್ರ, ಬ್ಯಾನರ್, ವೇದಿಕೆ: ವಿನ್ಯಾಸ, ಭಾವಚಿತ್ರದ ವ್ಯವಸ್ಥೆ, ಹೂವಿನ ಹಾರ, ಪೂಜಾ ವ್ಯವಸ್ಥೆ, ಪೋಟೋ, ವೇದಿಕೆಗೆ ಸಂಬಂಧಿಸಿದ ಇತರೆ ವ್ಯವಸ್ಥೆಯನ್ನು ಜಯಂತಿಯ ಅನುದಾನದಿಂದ ಭರಿಸುವುದು. ಸ್ವಯಂ ಪ್ರೇರಿತರಾಗಿ ಪ್ರಾಯೋಜಕರು ಮುಂದೆ ಬಂದಲ್ಲಿ ಸದರಿಯವರ ಸೇವೆಯನ್ನು ಪಡೆಯಬಹುದಾಗಿದೆ.
4. ವೇದಿಕೆ ಕಾರ್ಯಕ್ರಮದಲ್ಲಿ ಅಯಾ ಜಯಂತಿಯ ಮಹನೀಯರ ಜೀವಪ್ಪ ಸಾಧನೆ ಕುರಿತು ವಿಶೇಷ ಉಪನ್ಯಾಸ ಹಾಗೂ ನಂಗೀತ ಕಾರ್ಯಕ್ರಮ ಏರ್ಪಡಿಸುವುದು.
5. ವೇದಿಕೆಯ ಗಣ್ಯರಿಗೆ ಹೂಗುಚ್ಛದ ಬದಲಿಗೆ ಅಯಾ ಜಯಂತಿ ಮಹನೀಯರ ಕುರಿತ ಪುಸ್ತಕಗಳನ್ನು ನೀಡುವುದು ಸೂಕ್ತವಾಗಿರುತ್ತದೆ.
6. ಆಯಾ ಜಯಂತಿಯ ಆಹ್ವಾನ ಪತ್ರಿಕೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಯಂತಿ/ಉತ್ಸವ ಸಮಿತಿ ಅವರ ಸೂಚನೆ ಅನ್ವಯ ಶಿಷ್ಠಾಚಾರಕ್ಕೆ ಮಗುಣವಾಗಿ ಅತ್ತಿಥಿ ಗಣ್ಯರನ್ನು ಆಹ್ವಾನಿಸುವುದು.
7. ಜಯಂತಿಯ ಆಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಂದ (ಮಹಾನಗರಪಾಲಿಕೆಗಳು, ನಗರಸಭೆ, ಪಟ್ಟಣ, ಪಂಚಾಯತಿಗಳಲ್ಲಿ) ಎಲ್ಲಾ ಸಮಾಜಗಳ ಮುಖಕದಯ ಮತ್ತು ಸಂಘ ಸಂಸ್ಥೆಯ ಸಹಕಾರ ಪಡೆಯುವುದು.
6. ಪೂರ್ವಭಾವಿ ಸಭೆಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯಕ್ರಮವನ್ನು ರೂಪಿಸುವುದು.
9. ಪೂರ್ವಭಾವಿ ಸಭೆಗಳಲ್ಲಿ ಜಯಂತಿ ಆಚರಣೆಗೆ ನಂಬಂಧಿಸಿದಂತೆ ತೆಗೆದುಕೊಳ್ಳಲಾಗುವ ನಿರ್ಣಯದಂತೆ ಜಯಂತಿಯನ್ನು ಮಹನೀಯರ ಸಂದೇಶವನ್ನು ಸಮಾಜಕ್ಕೆ ತಲುಪಿಸುವಂತೆ ಆಚರಿಸುವುದು.
10. ಜಯಂತಿಗಳನ್ನು ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವುದು ಜಿಲ್ಲಾಡಳಿತದ ಪೂರ್ಣ ಜವಾಬ್ದಾರಿಯಾಗಿರುತ್ತದೆ. .
ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಪ್ರಚುರ ಪಡಿಸಬೇಕು.
12. ಪ್ರತಿ ಜಯಂತಿಯ ಸಂದರ್ಭದಲ್ಲಿ ವಿಶೇಷವಾಗಿ ಆ ಮಹಾಪುರುಷರ ವಿಶೇಷತೆಗಳನ್ನು ತಿಳಿಪಡಿಸುವಂತೆ ಅನುರೂಪವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು.
13. ಪ್ರತಿ ಆಚರಣೆ ಮುಗಿದ ಒಂದು ತಿಂಗಳ ಒಳಗಾಗಿ ಕಾರ್ಯಕ್ರಮದ ವರದಿ ಮತ್ತು ದಾಖಲೆಗಳನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು.
14. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರನ್ನು ಆಹ್ವಾನಿಸುವ ಸಂದರ್ಭದಲ್ಲಿ ಎಲ್ಲಾ ಕಲಾವಿದರಿಗೂ ಅವಕಾಶ ದೊರೆಯುವಂತೆ ಅವರ್ತನ ಪದ್ಧತಿಯಲ್ಲಿ ಕಲಾ ತಂಡಗಳನ್ನು ಗುರುತಿಸಿ ಅವಕಾಶ ನೀಡುವುದು.
15. ಕಾರ್ಯಕ್ರಮದ ಆಹ್ವಾನ ಪತ್ರಿಕೆ, ವೇದಿಕೆ ಮತ್ತು ಇತರ ಪ್ರಚಾರ ಸಾಮಾಗ್ರಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರನ್ನು ಕಡ್ಡಾಯವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳುವುದು.
16. ಜಯಂತಿಗಳಿಗೆ ಮಂಜೂರಾಗಿ ಬಿಡುಗಡೆಯಾದ ಹಣವನ್ನು ಅದೇ ಉದ್ದೇಶಕ್ಕಾಗಿಯೇ ಬಳಸತಕ್ಕದ್ದು. ಹಾಗೆ ಅಯಾ ಆರ್ಥಿಕ ವರ್ಷದಲ್ಲಿ ಬಳಸದೆ ಉಳಿದ ಹಣವನ್ನು ಸರ್ಕಾರಕ್ಕೆ ಅಧ್ಯರ್ಪಣೆ ಮಾಡಿ ಸಹಾಯಕ ನಿರ್ದೇಶಕರು ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದು.