ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಮೊದಲ ದಿನವೇ ಬಾಹುಬಲಿ ಹಾಗೂ RRR ದಾಖಲೆಗಳನ್ನು ಸರಿಗಟ್ಟಿದ್ದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ.ಪುಷ್ಪ ಚಿತ್ರ ಮೊದಲ ದಿನವೇ 294 ಕೋಟಿ ರೂ. ಗಳಿಕೆ ಮಾಡಿದರೆ ಎರಡನೇ ದಿನ ಒಟ್ಟು 449 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ಮೂರನೇ ದಿನಕ್ಕೆ ಒಟ್ಟು 621 ಕೋಟಿ ರೂ. ತಲುಪಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ‘ಪುಷ್ಪ’ ಮೂಲಕ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದ್ದು, ಚಿತ್ರತಂಡದೊಂದಿಗೆ ಸಂಭ್ರಮಿಸಿದ್ದಾರೆ.
ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿದ್ದು, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್, ಜಗಪತಿ ಬಾಬು, ಸುನಿಲ್, ಅನಸೂಯಾ ಭಾರದ್ವಾಜ್, ಷಣ್ಮುಖ, ಅಜಯ್ , ಆದಿತ್ಯ ಮೆನನ್, ಬ್ರಹ್ಮಾಜಿ ಉಳಿದ ತಾರಂಗಣದಲ್ಲಿದ್ದಾರೆ.
ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದು, ನವೀನ್ ನೂಲಿ ಸಂಕಲನ ಹಾಗೂ ಮಿರೋಸ್ಲಾವ್ ಕುಬಾ ಬ್ರೋಜೆಕ್ ಛಾಯಾಗ್ರಾಹಣವಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನವೀನ್ ಯೆರ್ನೇನಿ, ಯಲಮಂಚಿಲಿ ರವಿಶಂಕರ್ ನಿರ್ಮಾಣ ಮಾಡಿದ್ದಾರೆ.