HomeInternationalBREAKING: ಬಂಡುಕೋರರ ಹಿಡಿತಕ್ಕೆ ಸಿರಿಯಾ: ಅಧ್ಯಕ್ಷ ಅಸ್ಸಾದ್ ಗೆ ಆಶ್ರಯ ನೀಡಿದ ರಷ್ಯಾ

BREAKING: ಬಂಡುಕೋರರ ಹಿಡಿತಕ್ಕೆ ಸಿರಿಯಾ: ಅಧ್ಯಕ್ಷ ಅಸ್ಸಾದ್ ಗೆ ಆಶ್ರಯ ನೀಡಿದ ರಷ್ಯಾ

ಡಮಾಸ್ಕಸ್: ಬಂಡುಕೋರರು ಡಮಾಸ್ಕಸ್ ವಶಪಡಿಸಿಕೊಂಡ ನಂತರ ಪದಚ್ಯುತ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಮತ್ತು ಅವರ ಕುಟುಂಬ ರಷ್ಯಾಕ್ಕೆ ಆಗಮಿಸಿದ್ದಾರೆ. ಅವರಿಗೆ ರಷ್ಯಾದ ಅಧಿಕಾರಿಗಳು ಆಶ್ರಯ ನೀಡಿದ್ದಾರೆ ಎಂದು ಕ್ರೆಮ್ಲಿನ್ ಮೂಲವನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

“ಸಿರಿಯಾದ ಅಧ್ಯಕ್ಷ ಅಸ್ಸಾದ್ ಮಾಸ್ಕೋಗೆ ಆಗಮಿಸಿದ್ದಾರೆ. ಮಾನವೀಯ ಆಧಾರದ ಮೇಲೆ ರಷ್ಯಾ ಅವರಿಗೆ(ಅವರಿಗೆ ಮತ್ತು ಅವರ ಕುಟುಂಬಕ್ಕೆ) ಆಶ್ರಯ ನೀಡಿದೆ” ಎಂದು ಹೆಸರಿಸದ ಮೂಲವನ್ನು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ಸಿರಿಯಾ ಬಂಡುಕೋರ ಹೋರಾಟಗಾರರು ಡಮಾಸ್ಕಸ್‌ ಗೆ ನುಗ್ಗಿ ಅಸ್ಸಾದ್ ಅವರನ್ನು 0ಪದಚ್ಯುತಗೊಳಿಸಿದರು. 13 ವರ್ಷಗಳ ಅಂತರ್ಯುದ್ಧದ ಹಾದಿಯಲ್ಲಿ ಬಂಡುಕೋರರು ಸಂಪೂರ್ಣ ಪಾರಮ್ಯ ಸಾಧಿಸಿದ್ದಾರೆ. ಅಸಾದ್ ಅವರ ಕುಟುಂಬದ ಸುಮಾರು ಆರು ದಶಕಗಳ ಆಡಳಿತವನ್ನು ಕೊನೆಗೊಳಿಸಿದರು. ಇದು ಅಸ್ಸಾದ್‌ನ 24 ವರ್ಷಗಳ ಆಡಳಿತ ಮತ್ತು ಸಿರಿಯಾದಲ್ಲಿ ಅವರ ಕುಟುಂಬದ 50 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular