ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಗಳು ಭರ್ಜರಿ ಮನರಂಜನೆ ನೀಡಿದ್ದು, ಕಬಡ್ಡಿ ಪ್ರೇಮಿಗಳು ಪ್ರತಿದಿನ ಮಿಸ್ ಮಾಡದೆ ವೀಕ್ಷಣೆ ಮಾಡುತ್ತಿದ್ದಾರೆ. ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಪಟ್ನಾ ಪೈರೇಟ್ಸ್ ಮುಖಾಮುಖಿಯಾಗಲಿವೆ.
ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ರೈಡ್ ಮಷೀನ್ ಅರ್ಜುನ್ ದೇಸ್ವಾಲ್ ಒಂದು ಕಡೆಯಾದರೆ ಪಟ್ನಾ ಪೈರೇಟ್ಸ್ ನ ಯುವ ರೈಡರ್ ದೇವಾಂಕ್ ಮತ್ತೊಮ್ಮೆ ಮಿಂಚಲು ಸಜ್ಜಾಗಿದ್ದಾರೆ. ನಾನಾ ನೀನಾ ಎಂಬ ಈ ಕಾಳಗದಲ್ಲಿ ಯಾವ ರೈಡರ್ ಅಬ್ಬರಿಸಲಿದ್ದಾರೆ ಕಾದು ನೋಡಬೇಕಾಗಿದೆ. ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಏಳನೇ ಸ್ಥಾನದಲ್ಲಿದ್ದರೆ, ಪಟ್ನಾ ಪೈರೇಟ್ಸ್ ತಂಡ 5ನೇ ಸ್ಥಾನದಲ್ಲಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಪುಣೆರಿ ಪಲ್ಟಾನ್ ಕಾದಾಡಲಿವೆ.