HomeEntertainment'ಕಣ್ಣಾ ಮುಚ್ಚೆ ಕಾಡೇ ಗೂಡೇ' ಚಿತ್ರದ 'ನಿನ್ನ ನೋಡಿದಾಗಲೇ' ಹಾಡು ರಿಲೀಸ್

‘ಕಣ್ಣಾ ಮುಚ್ಚೆ ಕಾಡೇ ಗೂಡೇ’ ಚಿತ್ರದ ‘ನಿನ್ನ ನೋಡಿದಾಗಲೇ’ ಹಾಡು ರಿಲೀಸ್

ನಟರಾಜ್ ಕೃಷ್ಣೇಗೌಡ ನಿರ್ದೇಶನದ ‘ಕಣ್ಣಾ ಮುಚ್ಚೆ ಕಾಡೇ ಗೂಡೇ’ ಚಿತ್ರದ ‘ನಿನ್ನ ನೋಡಿದಾಗಲೇ’ ಎಂಬ ಮೆಲೋಡಿ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ವಾಸುಕಿ ವೈಭವ್ ಮತ್ತು ಸುರಭಿ ಭಾರದ್ವಾಜ್ ಧ್ವನಿಯಾಗಿದ್ದು,  ಸಂತೋಷ್ ಜೋಶುವಾ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಪುನೀತ್ ಆರ್ಯ ಸಾಹಿತ್ಯವಿದೆ.

ಈ ಚಿತ್ರವನ್ನು ಡಾರ್ಲಿಂಗ್  ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಅನಿತಾ ವೀರೇಶ್ ಕುಮಾರ್ ನಿರ್ಮಾಣ ಮಾಡಿದ್ದು, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅಥರ್ವ ಪ್ರಕಾಶ್, ಜ್ಯೋತಿಶ್ ಶೆಟ್ಟಿ, ಪ್ರಾರ್ಥನಾ, ದೀಪಕ್ ರೈ, ರವಿರಾಮ್ ಕುಂಜ, ಅರವಿಂದ್ ಬೋಳಾರ್, ವೀರೇಶ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಅಲೆಕ್ಸ್ ಹೆನ್ಸನ್ ಸಂಕಲನ ಹಾಗೂ ದೀಪಕ್ ಕುಮಾರ್ ಜೆ.ಕೆ. ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular