ಮೈಸೂರು: ಮೈಸೂರಿಗೆ ಪ್ರವಾಸಿಕ್ಕೆಂದು ಬರುವರಿಗೆ ನಿರಾಸೆ ಕಾದಿದೆ. ಸಾಮಾನ್ಯವಾಗಿ ಮೈಸೂರು ಪ್ರವಾಸಕ್ಕೆ ಬರುವ ಪ್ರವಾಸಿಗರು ಅರಮನೆ ವೀಕ್ಷಣೆ ಜೊತೆಗೆ ಚಿನ್ನದ ಅಂಬಾರಿ ವೀಕ್ಷಿಸಿ ಸಂಭ್ರಮಿಸುತ್ತಾರೆ. ಆದರೆ ಅಂಬಾರಿ ವೀಕ್ಷಣೆಗೆ ಇದೀಗ ನಿರ್ಬಂಧ ವಿಧಿಸಲಾಗಿದೆ.
ಪ್ರವಾಸಿಗರು ಅರಮನೆಯೊಳಗೆ ಚಿನ್ನದ ಅಂಬಾರಿಯನ್ನು ಕಣ್ತುಂಬಿಕೊಂಡು ಅದರೊಂದಿಗೆ ಸೆಲ್ಫಿ ತೆಗೆದುಕೊಂಡು ಆನಂದಿಸುತ್ತಾರೆ. ಆದರೆ ಚಿನ್ನದ ಅಂಬಾರಿ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂದ ಹೇರಲಾಗಿದೆ.
ಕೆಲ ದಿನಗಳ ಕಾಲ 750 ಕೆಜಿ ತೂಕದ ಚಿನ್ನದ ಅಂಬಾರಿ ವೀಕ್ಷಣೆಗೆ ಅವಕಾಶವಿಲ್ಲ. ಅಂಬಾರಿ ಕೆಳಗೆ ಹಾಗೂ ಹಿಂಭಾಗ ಮರದ ಕೆಲಸ ಸೇರಿದಂತೆ ವಿವಿಧ ರಿಪೇರಿ ಕೆಲಸ ಇರುವುದರಿಂದ ಸದ್ಯಕ್ಕೆ ಅಂಬಾರಿ ವೀಕ್ಷಣೆಗೆ ನಿರ್ಬಂಧವಿದೆ ಎಂದು ತಿಳಿದುಬಂದಿದೆ.