ಉತ್ತರ ಪ್ರದೇಶದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ಹದಿಹರೆಯದ ಹುಡುಗಿಯೊಬ್ಬಳು ತನ್ನ ಹಳ್ಳಿಯ ಜಾತ್ರೆಗೆ ಹೋದಾಗ ಅವಘಡವೊಂದು ಸಂಭವಿಸಿದೆ.
ಲಖಿಂಪುರ್ ಖೇರಿಯ ನಿಘಾಸನ್ ಪ್ರದೇಶದ ರಾಕೆಹ್ತಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಫೆರಿಸ್ ಜಾಯಿಂಟ್ ವ್ಹೀಲ್ ನಲ್ಲಿ ಕೂತಿದ್ದಾಗ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾಳೆ. 13 ವರ್ಷದ ಬಾಲಕಿ ತನ್ನ ಸಮತೋಲನವನ್ನು ಕಳೆದುಕೊಂಡು ಜಾಯಿಂಟ್ ವ್ಹೀಲ್ ನಲ್ಲಿ ಕೆಲಹೊತ್ತು ನೇತಾಡಿದ್ದಾಳೆ. ಸಹಾಯಕ್ಕಾಗಿ ಜೋರಾಗಿ ಕಿರುಚುತ್ತಿದ್ದಾಳೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಂತರ ನಿಧಾನವಾಗಿ ಜಾಯಿಂಟ್ ವ್ಹೀಲ್ ವಾಪಸ್ ತಿರುಗಿಸಿ ಬಾಲಕಿಯನ್ನು ರಕ್ಷಿಸಲಾಯಿತು. ಘಟನೆ ಕುರಿತು ಕ್ರಮಕ್ಕೆ ಆಗ್ರಹಿಸಲಾಗಿದೆ.
The girl got hung up on the big swing at the fair and kept swinging for about a minute, Lakhimpur Khiri
pic.twitter.com/nzNCIqkrYA— Ghar Ke Kalesh (@gharkekalesh) December 5, 2024