ಕಲಬುರಗಿ : ಪೆಟ್ರೋಲ್ ಸುರಿದು ಒಂದೇ ಕುಟುಂಬದ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪೆಟ್ರೋಲ್ ಸುರಿದು ಇಡೀ ಕುಟುಂಬವನ್ನು ಸಾಮೂಹಿಕವಾಗಿ ಕೊಲ್ಲಲು ಯತ್ನಿಸಿದ ಘಟನೆ ಕಲಬುರಗಿಯ ಕಡಣಿ ಗ್ರಾಮದಲ್ಲಿ ನಡೆದಿತ್ತು. ಗುಂಡೇರಾವ್ ಎಂಬುವವರ ಕುಟುಂಬದ ಮೇಲಿನ ದ್ವೇಷಕ್ಕೆ ಶಿವಲಿಂಗಪ್ಪ ಎಂಬಾತ ಈ ಕೃತ್ಯ ಎಸಗಿದ್ದನು. ಆರೋಪಿ ಶಿವಲಿಂಗಪ್ಪ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಶಿವಲಿಂಗಪ್ಪ ಗುಂಡೇರಾವ್ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಭಯದಿಂದ ಗುಂಡೇರಾವ್ ಕುಟುಂಬದವರು ಮನೆಯ ಬಾಗಿಲು ಬಂದ್ ಮಾಡಿದ್ದರು. ಕೂಡಲೇ ಗ್ರಾಮದ ಜನ ಬಾಗಿಲು ಒಡೆದು ಎಲ್ಲರನ್ನೂ ಕಾಪಾಡಿದ್ದರು.
ಜಮೀನು ವ್ಯಾಜ್ಯ ವಿವಾದಕ್ಕೆ ಸಂಬಂಧಿಸಿದಂತೆ ಇಡೀ ಕುಟುಂಬದ ಮೇಲೆ ಕೊಲೆ ಯತ್ನ ನಡೆದಿದೆ. 4 ಎಕರೆ ಜಮೀನು ಮಾರಾಟ ವಿಚಾರಕ್ಕೆ ಗಲಾಟೆ ನಡೆದಿದೆ. ಶಿವಲಿಂಗಪ್ಪ ಎಂಬುವವರು 4 ಎಕರೆ ಜಮೀನನನ್ನು ಗುಂಡೇರಾವ್’ಗೆ ಮಾರಾಟ ಮಾಡಿದ್ದರು. ಜಮೀನು ನೋಂದಣಿ ವಿಚಾರಕ್ಕೆ 2 ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು.