ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹವನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಶಂಕಿತ ಉಗ್ರ ಜುಲ್ಫಿಕರ್ ಸೇರಿ 6 ಕೈದಿಗಳನ್ನು ಸ್ಥಳಾಂತರಿಸಲು ಕಾರಾಗೃಹ ಇಲಾಖೆ ಮುಂದಾಗಿದೆ.
ವಿವಿಧ ಕಾರಾಗೃಹಗಳಿಗೆ ಕೈದಿಗಳನ್ನು ಸ್ಥಳಾಂತರಿಸಲು ಕೋರ್ಟ್ ಸಮ್ಮತಿ ಸೂಚಿಸಿದೆ. 2013ರಲ್ಲಿ ಬೆಂಗಳೂರಿನ ಮಲ್ಲೇಶ್ವಂನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೊಪಿಯಾಗಿರುವ ಜುಲ್ಫಿಕರ್, ಶಿವಮೊಗ್ಗ ರೌಡಿಶೀಟರ್ ಬಚ್ಚನ್ ಸೇರಿದಂತೆ 6 ಕೈದಿಗಳನ್ನು ಸ್ಥಳಾಂತರ್ಸಲು ಕಾರಾಗೃಹ ಇಲಾಖೆ ತೀರ್ಮಾನಿಸಿದೆ.
ಆರೋಪಿಗಳು ಕಲಬುರಗಿ ಸೆಂಟ್ರಲ್ ಜೈಲಿನ ವಾತಾವರಣವನ್ನೇ ಹಾಳುಮಾಡಿದ್ದಾರೆ. ಜೈಲು ಅಧಿಕಾರಿಗಳ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಜೈಲಿನಲ್ಲಿಯೇ ಐಷಾರಾಮಿ ಜೀವನ ನಡೆಸುತ್ತಿದ್ದರು. ಜೈಲಿಗೆ ಹೊಸ ಅಧೀಕ್ಷಕರು ಬರುತ್ತಿದ್ದಂತೆ ಕೈದಿಗಳ ಆಟಕ್ಕೆ ಬ್ರೇಕ್ ಬಿದ್ದಿದ್ದೆ. ಇದರಿಂದ ಜೈಲಿನಲ್ಲಿಯೇ ಕೈದಿಗಳು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಜೈಲು ಅಧೀಕ್ಷಕರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಅಧೀಕ್ಷಕಿ ಡಾ.ಅನಿತಾ ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ.