ಪ್ರಕರಣದಿಂದ ಪಾರು ಮಾಡಲು ಲೈಂಗಿಕ ಕ್ರಿಯೆಗೆ ಬೇಡಿಕೆ; ಪೊಲೀಸ್ ಅಧಿಕಾರಿ ಅಶ್ಲೀಲ ವಿಡಿಯೋ ʼವೈರಲ್ʼ 05-12-2024 10:57AM IST / No Comments / Posted In: Latest News, India, Live News, Crime News ಬಿಹಾರದ ಸಮಸ್ತಿಪುರದಲ್ಲಿ, ಪ್ರಕರಣವೊಂದರ ಪರಿಹಾರಕ್ಕಾಗಿ ಪೋಲೀಸನೊಬ್ಬ ಮಹಿಳೆಯನ್ನು ಲೈಂಗಿಕತೆಗೆ ಒತ್ತಾಯಿಸಿದ್ದಾನೆ. ಮಹಿಳೆ ರಹಸ್ಯವಾಗಿ ಇದನ್ನು ರೆಕಾರ್ಡ್ ಮಾಡಿದ್ದು, ವೀಡಿಯೊ ವೈರಲ್ ಆದ ನಂತರ ಆರೋಪಿಯನ್ನು ಅಮಾನತು ಮಾಡಿ ಆತನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ ಪಟೋರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಬಿಲಾಲ್ ಖಾನ್, ಮಹಿಳೆ ಮುಂದೆ ಇಂತಹ ಆಘಾತಕಾರಿ ಬೇಡಿಕೆ ಇಟ್ಟಿದ್ದು, ಎರಡು ವರ್ಷದ ಹಿಂದಿನ ಪ್ರಕರಣವೊಂದರಲ್ಲಿ ಆರೋಪಿ ಮಹಿಳೆಯನ್ನು ಕೇಸ್ ರಿಲೀಫ್ ನೀಡುವ ನೆಪದಲ್ಲಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಖಾಸಗಿ ನಿವಾಸಕ್ಕೆ ಈ ಅಧಿಕಾರಿ ಮಹಿಳೆಯನ್ನು ಕರೆಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆ ತನ್ನ ಮೊಬೈಲ್ ಫೋನ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ, ಅಧಿಕಾರಿ ಅನುಚಿತವಾಗಿ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ. ಪೊಲೀಸ್ ಅಧಿಕಾರಿ ಮಹಿಳೆಗೆ “ ಜೈಲ್ ನಹೀ ಜಾನಾ ಹೈ ತೊ ಮೇರೆ ಸಾಥ್ ಸೆಕ್ಸ್ ಕರೋ ” ಎಂದು ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು. ವಿಡಿಯೋ ಬೆಳಕಿಗೆ ಬಂದ ನಂತರ ಸಮಸ್ತಿಪುರ ಎಸ್ಪಿ ಅಧಿಕಾರಿಯನ್ನು ಅಮಾನತು ಮಾಡಿ ತನಿಖೆ ಆರಂಭಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. बिहार :जेल नहीं जाना है तो मेरे साथ सेक्स करो’, दारोगा का अश्लील हरकत करते वीडियो वायरल,समस्तीपुर जिले के पटोरी थाने में तैनात एक दारोगा का युवती से अश्लील हरकत करते वीडियो आया सामने @bihar_police @Samastipur_Pol #Bihar #BiharNews #Samastipur pic.twitter.com/AutsP5GlpF — FirstBiharJharkhand (@firstbiharnews) December 4, 2024 समस्तीपुर जिला के पटोरी थाना अंतर्गत वायरल वीडियों के संबंध में … @bihar_police@bihar_iprd@ANI#samastipur #samastipurpolice #BiharPolice #HainTaiyaarHum pic.twitter.com/TrKDF3Pvsl — Samastipur Police (@Samastipur_Pol) December 3, 2024