ದಕ್ಷಿಣ ಮುಂಬೈನ ಗಿರ್ಗಾಂವ್ ಪ್ರದೇಶದಲ್ಲಿ MNS ಕಾರ್ಯಕರ್ತರ ಗುಂಪೊಂದು ಅಂಗಡಿಯವನಿಗೆ ಕಪಾಳಮೋಕ್ಷ ಮಾಡಿದೆ. ಅಂಗಡಿಯವನು ಮರಾಠಿ ಮಾತನಾಡಿದ ಮಹಿಳೆಯನ್ನು ಮರಾಠಿಯ ಬದಲಿಗೆ ಮಾರ್ವಾಡಿಯಲ್ಲಿ ಮಾತನಾಡುವಂತೆ ಹೇಳಿದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಅಂಗಡಿಯವನು ಮಹಿಳೆಗೆ ಮಾರವಾಡಿಯಲ್ಲಿ ಮಾತನಾಡಲು ಹೇಳಿದ್ದ ಎನ್ನಲಾಗಿದೆ.
ಗಿರ್ಗಾಂವ್‌ನ ಖೇತ್ವಾಡಿ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ, ಅಂಗಡಿಯವನಿಗೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ ನಂತರ ಆತ ಮಹಿಳೆ ಮುಂದೆ ಕ್ಷಮೆ ಯಾಚಿಸಿದ್ದಾನೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಮಾರ್ವಾಡಿಯಲ್ಲಿ ತನ್ನೊಂದಿಗೆ ಮಾತನಾಡುವಂತೆ ಅಂಗಡಿಯವನು ಕೇಳಿದ್ದಾಗಿ ಮಹಿಳೆ ಮರಾಠಿಯಲ್ಲಿ ಹೇಳಿದ್ದಾರೆ. ನೀವು ಮರಾಠಿಯಲ್ಲ ಮಾರ್ವಾಡಿಯಲ್ಲಿ ಮಾತನಾಡಬೇಕು. “ಮುಂಬೈ ಬಿಜೆಪಿ ಕಾ, ಮುಂಬೈ ಮಾರ್ವಾಡಿ ಕಾ” ಎಂದು ಆತ ಹೇಳಿದ್ದ ಎನ್ನಲಾಗಿದೆ.