ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣ ವಿಚಾರದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಮುಡಾ ಕ್ಲೀನ್ ಗೆ ಸಿಎಂ ಸಿದ್ದರಾಮಯ್ಯ ಮೊದಲ ಹೆಜ್ಜೆ ಇಟ್ಟಿದ್ದಾರೆ.
ರಾತ್ರೋರಾತ್ರಿ 42 ನಿವೇಶನಗಳನ್ನು ಮುಡಾ ಆಯುಕ್ತ ರಘುನಂದನ್ ರದ್ದುಪಡಿಸಿದ್ದಾರೆ. ಎಲ್ಲಾ ಕಾನೂನು ಗಾಳಿಗೆ ತೂರಿ 48 ಜನರಿಗೆ ನಿವೇಶನ ಹಂಚಲಾಗಿತ್ತು. ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿವೇಶನಗಳನ್ನು ಐದಾರು ಲಕ್ಷ ರೂಪಾಯಿಗೆ ಹಂಚಿಕೆ ಮಾಡಲಾಗಿತ್ತು. ಕೇವಲ ಐದಾರು ಲಕ್ಷ ರೂಪಾಯಿಗಳಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಹಂಚಿಕೆ ಮಾಡಿದ್ದರು.
ಅಸ್ತಿತ್ವವೇ ಇಲ್ಲದ ಸಹಕಾರ ಸಂಘದ ಹೆಸರಲ್ಲಿ ಮುಡಾ ಸೈಟುಗಳನ್ನು ಹಂಚಲಾಗಿತ್ತು. ಚಾಮುಂಡೇಶ್ವರಿ ನಗರದ ಸರ್ವೋದಯ ಸಂಘದ ಸದಸ್ಯರು ಎಂದು ಹಂಚಿಕೆ ಮಾಡಲಾಗಿತ್ತು. ಮುಡಾ ನಿವೇಶನ ಹಂಚಿಕೆಯಲ್ಲಿ ಬೇನಾಮಿ ಇದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದು ಬಹುದೊಡ್ಡ ಅಕ್ರಮ ಎಂದು ಹಿಂದಿನ ಜಿಲ್ಲಾಧಿಕಾರಿ ರಾಜೇಂದ್ರ ವರದಿ ಕೊಟ್ಟಿದ್ದರು.
ವರದಿಯನ್ನು ಆಂತರಿಕವಾಗಿ ತನಿಖೆ ಮಾಡಿಸಿದ್ದ ರಾಜ್ಯ ಸರ್ಕಾರ ನಿನ್ನೆ ರಾತ್ರಿವ ರಾತ್ರಿ ಎಲ್ಲಾ 48 ಸೈಟ್ ಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಘುನಂದನ್ ಆದೇಶ ಹೊರಡಿಸಿದ್ದಾರೆ. 48 ನಿವೇಶನಗಳ ಖಾತೆ ನೋಂದಣಿ, ಖಾತೆ ವರ್ಗಾವಣೆ ಮಾಡದಂತೆ 48 ನಿವೇಶನಗಳ ವಿವರದ ಜೊತೆಗೆ ನಗರಪಾಲಿಕೆ ಆಯುಕ್ತರಿಗೆ ಮತ್ತು ಜಿಲ್ಲಾ ನೋಂದಣಾಧಿಕಾರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.