ದೆಹಲಿ ಮೆಟ್ರೋ ರೈಲಿನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ನಡೆದ ತೀವ್ರ ವಾಗ್ವಾದವನ್ನು ಸೆರೆಹಿಡಿಯುವ ವೀಡಿಯೊ ವೈರಲ್ ಆಗಿದ್ದು, ವ್ಯಾಪಕ ಗಮನವನ್ನು ಸೆಳೆಯುತ್ತಿದೆ. ಅಲ್ಲದೇ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ನಡವಳಿಕೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಸಹಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ದಾಖಲಿಸಲ್ಪಟ್ಟ ಈ ಘಟನೆಯ ವಿಡಿಯೋ ಈಗ ಫುಲ್ ವೈರಲ್ ಆಗಿದೆ.
ಯಾವುದೋ ಒಂದು ವಿಷಯದ ಕುರಿತು ಇಬ್ಬರು ವ್ಯಕ್ತಿಗಳು ಜಗಳವಾಡುವುದರೊಂದಿಗೆ ಈ ದೃಶ್ಯಾವಳಿ ಪ್ರಾರಂಭವಾಗುತ್ತದೆ. ಕೆಲವೇ ಕ್ಷಣಗಳಲ್ಲಿ, ಮುಖಾಮುಖಿಯು ತೀವ್ರಗೊಂಡಿದ್ದು, ಇಬ್ಬರೂ ಪರಸ್ಪರ ಗುದ್ದಾಡಲು ಪ್ರಾರಂಭಿಸುತ್ತಾರೆ.
ಇತರ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದು, ಗಲಾಟೆ ನಿಲ್ಲಿಸುವಂತೆ ಹೇಳಿದ್ದಾರೆ. ಇಷ್ಟಾದರೂ ಅವರ ಪ್ರಯತ್ನಗಳು ವ್ಯರ್ಥವಾಗಿದ್ದು, ಇಬ್ಬರ ಹೋರಾಟ ಮುಂದುವರೆದಿದೆ, ಇದು ಮೆಟ್ರೋದಂತಹ ಸಾರ್ವಜನಿಕ ಸ್ಥಳಗಳಲ್ಲಿ ಸುವ್ಯವಸ್ಥೆಯನ್ನು ಕಾಪಾಡುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೋ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಕೆಲವರು ವ್ಯಕ್ತಿಗಳ ನಡವಳಿಕೆಯನ್ನು ಟೀಕಿಸಿದರೆ, ಇತರರು ದೆಹಲಿ ಮೆಟ್ರೋದಲ್ಲಿ ಹೆಚ್ಚುತ್ತಿರುವ ಸಾರ್ವಜನಿಕ ಜಗಳಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Delhi Metro viral video ||
दिल्ली मेट्रो का वीडियो फिर वायरल, दो लोगों में भयंकर मारपीट, रोकने पर भी नहीं रुके !!
वीडियो में दिख रहा है कि मेट्रो में दो लोग किसी बात पर हाथापाई शुरू कर देते हैं, दोनों एक दूसरे पर जमकर मुक्के बरसाने लगते हैं !!
इस दौरान अचानक से एक शख्स गिर… pic.twitter.com/uiZPzzUcMP
— MANOJ SHARMA LUCKNOW UP🇮🇳🇮🇳🇮🇳 (@ManojSh28986262) November 30, 2024