ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ವರದಿಯಾದ ವಿಲಕ್ಷಣ ಪ್ರಕರಣವೊಂದರಲ್ಲಿ ಮಾನವನ ಮುಖ ಲಕ್ಷಣಗಳನ್ನು ಹೋಲುವ ಮೇಕೆ ಮರಿ ಜನಿಸಿದೆ. ಅಸಾಮಾನ್ಯ ಲಕ್ಷಣಗಳೊಂದಿಗೆ ಜನಿಸಿದ ಮೇಕೆ ಮರಿಯನ್ನು ನೋಡಿ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.
ಹೆಚ್ಚಿನ ಮೇಕೆ ಮರಿಗಳಿಗಿಂತ ಭಿನ್ನವಾಗಿ ಇತ್ತೀಚೆಗೆ ಕಿಶ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಮರಿ ಜನಿಸಿದ್ದು, ಕೂದಲುಳ್ಳ ನೋಟ ಮತ್ತು ಮುಖದ ಒಂದು ಬದಿಗೆ ಚಾಚಿಕೊಂಡಿರುವ ಉದ್ದನೆಯ ನಾಲಿಗೆಯನ್ನು ಹೊಂದಿತ್ತು. ಅಲ್ಲದೆ, ಅದರ ಕಣ್ಣುಗಳು ಸಾಮಾನ್ಯ ಮೇಕೆಗಿಂತ ಸಾಕಷ್ಟು ಭಿನ್ನವಾಗಿತ್ತು. ಇದು ಸ್ವಲ್ಪಮಟ್ಟಿಗೆ ಮನುಷ್ಯನಂತೆ ಕಂಡುಬಂದಿದ್ದು, ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿತು.
ಗ್ರಾಮದ ನಿವಾಸಿ ಶೇರ್ ಸಿಂಗ್ ಎಂಬವರ ಮನೆಯಲ್ಲಿ ಈ ಮೇಕೆ ಜನ್ಮ ನೀಡಿದೆ ಎಂದು ವರದಿಯಾಗಿದ್ದು, ಘಟನೆಯನ್ನು ಪವಾಡ ಎಂದು ಬಣ್ಣಿಸಲಾಗುತ್ತಿದೆ. ಈ ಮೇಕೆಯ ಮಾಲೀಕ ಸಿಂಗ್, ಕ್ಯಾಮೆರಾ ಮುಂದೆ ಇದರ ವಿಶಿಷ್ಟ ಲಕ್ಷಣಗಳನ್ನು ತೋರಿಸುತ್ತಿರುವುದನ್ನು ಕಂಡುಬಂದಿದೆ.
ಇಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರಾಣಿಯ ಜನನ ಇದೇ ಮೊದಲೇನಲ್ಲ. ಮೇಕೆಗಳು ಮಾನವ ತರಹದ ಸಂತತಿಗೆ ಜನ್ಮ ನೀಡಿದಂತಹ ಘಟನೆಗಳು ಈ ಹಿಂದೆ ನಡೆದಿದ್ದವು.
2022 ರಲ್ಲಿ, ಬಿಹಾರದ ಮುಂಗೇರ್ ಪ್ರದೇಶದಲ್ಲಿ ಇಂತಹ ಘಟನೆ ವರದಿಯಾಗಿದ್ದು, ಅಲ್ಲಿ ಮೇಕೆ, ಮಾನವನಂತಿರುವ ಕಣ್ಣುಗಳನ್ನು ಹೊಂದಿರುವ ಮರಿಗೆ ಜನ್ಮ ನೀಡಿತ್ತು. ಅದೇ ವರ್ಷದಲ್ಲಿ, ಮಧ್ಯಪ್ರದೇಶದ ಸೆಮಲ್ ಖೇಡಿ ಗ್ರಾಮದಿಂದ ಇದೇ ರೀತಿಯ ಮತ್ತೊಂದು ಪ್ರಕರಣವು ಹೊರಹೊಮ್ಮಿತ್ತು.
मैनपुरी – बकरी ने दिया अजब-ग़ज़ब बच्चे को जन्म
➡बकरी से जन्मे बच्चे को देखने उमड़ी भीड़
➡कुदरत के अजूबे से जोड़ कर देख रहे ग्रामीण
➡पशुपालक बच्चे का गोद में पालन पोषण कर रहे
➡शेर सिंह के घर में बकरी ने अनोखे बच्चे को जन्मा
➡थाना किशनी क्षेत्र के ग्राम बसेत का मामला.… pic.twitter.com/fTgh4lbm4z— भारत समाचार | Bharat Samachar (@bstvlive) December 1, 2024