HomeKarnatakaBIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು ‘ವಿಶ್ವ ವಿಕಲಚೇತನರ ದಿನಾಚರಣೆ' ಕಡ್ಡಾಯ :...

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು ‘ವಿಶ್ವ ವಿಕಲಚೇತನರ ದಿನಾಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ.!

ಬೆಂಗಳೂರು : ಡಿ. 3 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವಿಶ್ವ ವಿಶೇಷ ಚೇತನರ ದಿನಾಚರಣೆಯ ಉದ್ದೇಶಗಳು

* ವಿಶೇಷ ಚೇತನರ ಸಮಸ್ಯೆಗಳನ್ನು ಅರಿಯುವುದು ಮತ್ತು ಇವರ ಆತ್ಮಗೌರವನ್ನು ಹೆಚ್ಚಿಸುವ
ಹಕ್ಕುಗಳನ್ನು ರಕ್ಷಿಸುವ ಮತ್ತು ಇವರ ಒಳಿತಿಗಾಗಿ ಕ್ರಮವಹಿಸುವುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ವಿಶೇಷ ಚೇತನರನ್ನು ಮುಖ್ಯವಾಹಿನಿಗೆ ಸೇರಿಸುವ ಕುರಿತು ಜಾಗೃತಿ, ಸಮಾನ ಅವಕಾಶ, ಸೌಲಭ್ಯ
ಕಲ್ಪಿಸುವುದು. ವಿಶೇಷ ಚೇತನರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹಾಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳನ್ನು ಒದಗಿಸುವುದು ಮತ್ತು ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು.

* ಪ್ರತಿ ವರ್ಷದಂತೆ, 2024-25 ನೇ ಸಾಲಿನಲ್ಲಿಯೂ ಡಿಸೆಂಬರ್- 03 ರಂದು ಶಾಲಾ, ಕ್ಲಸ್ಟರ್, ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ವಿಶ್ವವಿಶೇಷ ಚೇತನರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು.

* ಶಾಲಾ ಹಂತದಲ್ಲಿ ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳು

ಪೂರ್ವಭಾವಿಯಾಗಿ ಚಟುವಟಿಕೆ/ ಕಾರ್ಯಕ್ರಮಗಳನ್ನು ಯೋಜಿಸಿ, ಅಗತ್ಯ ಸಿದ್ಧತೆಗಳೊಂದಿಗೆಅರ್ಥಪೂರ್ಣವಾಗಿ ಆಚರಿಸುವುದು.

ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ರೀತಿಯ ನ್ಯೂನ್ಯತೆಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಇಂತಹ ವಿದ್ಯಾರ್ಥಿಗಳಿಗೆ ಕಲಿಕಾ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ನೀಡಬೇಕಾದಸಹಕಾರದ ಕುರಿತು ಅರಿವು ಮೂಡಿಸುವುದು, ಈ ಕುರಿತು ಮುಕ್ತ ಚರ್ಚೆಗೆ ಅವಕಾಶ ಒದಗಿಸುವುದು.

ಶಾಲಾ ಹಂತದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಒದಗಿಸಿ, ಅವರಿಗೆ ಅವಕಾಶ ನೀಡುವುದು. ಉದಾ: ಅವರಲ್ಲಿನ ಕಲೆ, ಸೃಜನಶೀಲತೆ, ನಾವಿನ್ಯತೆ, ಕ್ರೀಡಾ ಕೌಶಲ ಇತ್ಯಾದಿ.
ವಿಶೇಷ ಚೇತರನ್ನು ಗೌರವಿಸುವ, ಸಮಾನ ಅವಕಾಶ ನೀಡುವ ಕುರಿತು ಎಲ್ಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular