HomeKarnatakaಅಕ್ರಮವಾಗಿ ಶ್ರೀಗಂಧ ಸಾಗಾಟ: ಓರ್ವ ಆರೋಪಿ ಅರೆಸ್ಟ್; 16 ಲಕ್ಷ ಮೌಲ್ಯದ ಮಾಲು ಜಪ್ತಿ

ಅಕ್ರಮವಾಗಿ ಶ್ರೀಗಂಧ ಸಾಗಾಟ: ಓರ್ವ ಆರೋಪಿ ಅರೆಸ್ಟ್; 16 ಲಕ್ಷ ಮೌಲ್ಯದ ಮಾಲು ಜಪ್ತಿ

ಬೀದರ್: ಅಕ್ರಮವಾಗಿ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬೀದರ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣ ಮೂಲದ ಪಿ.ಕೆ.ಭದ್ರುದ್ದೀನ್ ಬಂಧಿತ ಆರೋಪಿ. ಬಸವಕಲ್ಯಾಣ ತಾಲುಕಿನ ಸಸ್ತಾಪೂರ್ ಬಳಿ ಆರೋಪಿಯನ್ನು ಬಂಧಿಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧವನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಯಿಂದ 16 ಲಕ್ಷ ಮೌಲ್ಯದ ಶ್ರೀಗಂಧ ಜಪ್ತಿ ಮಾಡಲಾಗಿದೆ. ಗೂದ್ಸ್ ವಾಹನದಲ್ಲಿ ಅಕ್ರಮವಾಗಿ ಬೀದರ್ ನಿಂದ ತೆಲಂಗಾಣಕ್ಕೆ ಶ್ರೀಗಂಧ ಸಾಗಾಟ ಮಾಡಲಾಗುತ್ತಿತ್ತು. ಬಳಿಕ ಅಲ್ಲಿಂದ ಮಹಾರಾಷ್ಟ್ರ ಹಾಗೂ ಮುಂಬೈಗೆ ಸಾಗಿಸುತ್ತಿದ್ದರು ಎಂದು ತಿಳಿದುಬದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular