ಕಲಬುರಗಿ : ಅನಾಮಧೇಯ ವ್ಯಕ್ತಿಯೋರ್ವ ಕಲಬುರಗಿ ಸೆಂಟ್ರಲ್ ಜೈಲಿನ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಪೋಟಿಸುವ ಬೆದರಿಕೆ ಸಂದೇಶ ಕಳುಹಿಸಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಪೊಲೀಸ್ ಇನ್ಸ್ ಪೆಕ್ಟರ್ ಮೊಬೈಲ್ ಗೆ ಈ ಆಡಿಯೋ ಸಂದೇಶ ಬಂದಿದೆ. ಸಂದೇಶ ಬರುತ್ತಿದ್ದಂತೆ ಅಲರ್ಟ್ ಆದ ಅನಿತಾ ಅವರು ಸಿಸಿಟಿವಿ ಇರುವ ಕಡೆ ಕಾರು ಪಾರ್ಕ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಒಂದೂವರೆ ತಿಂಗಳಿನ ಹಿಂದೆಯಷ್ಟೇ ಅನಿತಾ ಅವರು ಕಲಬುರಗಿ ಸೆಂಟ್ರಲ್ ಜೈಲಿಗೆ ವರ್ಗಾವಣೆ ಆಗಿದ್ದರು. ಜೈಲಿನಲ್ಲಿ ಕಠಿಣ ನಿಯಮ ಜಾರಿಗೊಳಿಸಲು ಮುಂದಾಗಿದ್ದಕ್ಕೆ ಕೈದಿಗಳೇ ಬೆದರಿಕೆ ಸಂದೇಶ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ.ಅದೇನೆ ಇರಲಿ ತನಿಖೆಯಿಂದಷ್ಟೇ ಸತ್ಯ ತಿಳಿದು ಬರಬೇಕಿದೆ.