ಬೆಂಗಳೂರು : ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಗೆ ಬರುವ ಮನೆಗಳ ನೀರಿನ ಶುಲ್ಕ ಮತ್ತು ಆಸ್ತಿ ತೆರಿಗೆಯನ್ನು ಸ್ವ-ಸಹಾಯ ಸಂಘಗಳ ಮುಖಾಂತರ ಸಮರ್ಪಕವಾಗಿ ವಸೂಲಾತಿ/ಸಂಗ್ರಹಣೆ ಮಾಡಲು ಡೇ-ನಲ್ಮ್ ಯೋಜನೆಯಡಿ ನೊಂದಾಯಿಸಿಕೊಂಡಿರುವ ಅರ್ಹ ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಹಿಳಾ ಸ್ವ-ಸಹಾಯ ಸಂಘ ರಚಿತವಾಗಿ 3 ವರ್ಷ ಪೂರೈಸಿರಬೇಕು, ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು, ಸಂಘದ ಸದಸ್ಯರು ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬಾರದು. ಆಸಕ್ತ ಸ್ವ-ಸಹಾಯ ಗುಂಪುಗಳು ಅರ್ಜಿಯನ್ನು ಚಿಕ್ಕಬಾಣಾವರ ಪುರಸಭೆ ಇಲ್ಲಿ ಡಿಸೆಂಬರ್ 07 ಸಂಜೆ 5.00 ಗಂಟೆಯೊಳಗೆ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ್ ಶಾಖೆ, ಪುರಸಭೆ ಕಾರ್ಯಾಲಯ, ಚಿಕ್ಕಬಾಣಾವರ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ಇಲ್ಲಿ ಸಂಪರ್ಕಿಸಬಹುದು ಎಂದು ಚಿಕ್ಕಬಾಣಾವರ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.