ನಾರ್ವೆ ಸ್ತ್ರೀ ರೋಗತಜ್ಞನ ನೀಚ ಕೃತ್ಯ: ಎರಡು ದಶಕಗಳಲ್ಲಿ 87 ಮಹಿಳೆಯರ ಮೇಲೆ ಅತ್ಯಾಚಾರ

ನಾರ್ವೆ ದೇಶದಲ್ಲಿ ಈಗ ಬಹಿರಂಗವಾಗಿರುವ ಲೈಂಗಿಕ ಹಗರಣವೊಂದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಸ್ತ್ರೀ ರೋಗ ತಜ್ಞನೊಬ್ಬ ಎರಡು ದಶಕಗಳ ಅವಧಿಯಲ್ಲಿ 87 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ತನ್ನ ನೀಚ ಕೃತ್ಯವನ್ನು ರೆಕಾರ್ಡ್‌ ಮಾಡಿಕೊಂಡಿದ್ದು, 6 ಸಾವಿರಕ್ಕೂ ಅಧಿಕ ವಿಡಿಯೋಗಳು ಲಭ್ಯವಾಗಿವೆ.

ನಾರ್ವೆಯ ಇತಿಹಾಸದಲ್ಲಿ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಹಗರಣ ಎಂದು ಕರೆಯಲಾಗುತ್ತಿರುವ ಈ ಪ್ರಕರಣದಲ್ಲಿ, ವೈದ್ಯ 87 ಮಹಿಳೆಯರನ್ನು ವ್ಯವಸ್ಥಿತವಾಗಿ ಅತ್ಯಾಚಾರ ಮಾಡಿದ ಆರೋಪದಲ್ಲಿ ವಿಚಾರಣೆಯಲ್ಲಿದ್ದಾನೆ. 55 ವರ್ಷದ ಆರ್ನೆ ಬೈ ಎಂಬಾತನೇ ಇಂತಹ ಕೃತ್ಯವೆಸಗಿದ ವೈದ್ಯನಾಗಿದ್ದಾನೆ.

ಈತ 14 ವರ್ಷ ವಯಸ್ಸಿನವರಿಂದ 67 ವರ್ಷ ವಯಸ್ಸಿನವರವರೆಗಿನ ಮಹಿಳೆಯರನ್ನು ತನ್ನ ನೀಚ ಕೃತ್ಯಕ್ಕೆ ಬಳಸಿಕೊಂಡಿರುವುದು ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಅರ್ನೆ ಬೈ ಮೇಲಿನ ಆರೋಪ ಸಾಬೀತಾದರೆ ಆತ ಗರಿಷ್ಠ 21 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಾನೆ. ತನಿಖಾಧಿಕಾರಿಗಳು 6,000 ಗಂಟೆಗಳ ವೀಡಿಯೊ ರೆಕಾರ್ಡಿಂಗ್‌ ಬಹಿರಂಗಪಡಿಸಿದ್ದು, ರೋಗಿಗಳ ಒಪ್ಪಿಗೆಯಿಲ್ಲದೇ ಪರೀಕ್ಷೆಯ ವಿಡಿಯೋಗಳನ್ನೂ ಈತ ತೆಗೆದಿದ್ದ ಎನ್ನಲಾಗಿದೆ.

ಈ ಪ್ರಕರಣವು ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ವೈದ್ಯಕೀಯ ವೃತ್ತಿಯೊಳಗಿನ ನಂಬಿಕೆಯ ದುರುಪಯೋಗ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಂಭಾವ್ಯ ಕ್ರಿಮಿನಲ್ ಚಟುವಟಿಕೆಗಳನ್ನು ಆರೋಗ್ಯ ಅಧಿಕಾರಿಗಳು ವರದಿ ಮಾಡಿದ ನಂತರ ಪೊಲೀಸರು ಆಗಸ್ಟ್ 2022 ರಲ್ಲಿ ಆರ್ನೆ ಬೈ ವಿರುದ್ದ ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಗಳ ತೀವ್ರತೆಯ ಹೊರತಾಗಿಯೂ, 2023 ರಲ್ಲಿ ಅಧಿಕೃತವಾಗಿ ಆರೋಪ ಪಟ್ಟಿ ಸಲ್ಲಿಸುವವರೆಗೂ ಬೈ ಅವರಿಗೆ ಅದೇ ಸ್ಥಾನದಲ್ಲಿ ಉಳಿಯಲು ಅನುಮತಿ ನೀಡಲಾಗಿತ್ತು. ಅಧಿಕಾರಿಗಳು ಬೈ ಅವರನ್ನು ಇದುವರೆಗೂ ಬಂಧಿಸಿಲ್ಲವಾಗಿದ್ದು, ಅವರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ ವಿಚಾರಣೆ ಮುಂದುವರಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read