HomeCrimeಸೋದರಳಿಯನ ಜೊತೆ ಅತ್ತೆ ಅನೈತಿಕ ಸಂಬಂಧ; ಬೆಚ್ಚಿಬೀಳಿಸುತ್ತೆ ನಂತರ ನಡೆದ ದುರಂತ

ಸೋದರಳಿಯನ ಜೊತೆ ಅತ್ತೆ ಅನೈತಿಕ ಸಂಬಂಧ; ಬೆಚ್ಚಿಬೀಳಿಸುತ್ತೆ ನಂತರ ನಡೆದ ದುರಂತ

ಗ್ರೇಟರ್ ನೋಯ್ಡಾದ ಜಾರ್ಚಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲೌಂಡಾ ಗ್ರಾಮದಲ್ಲಿ ತನ್ನ ಮನೆಯಲ್ಲಿ ಒಂಟಿಯಾಗಿದ್ದ ವಿಧವೆ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಪಕ್ಕದ ಮನೆ ಯುವಕನೇ ಕೊಲೆ ಮಾಡಿದ್ದು, ಅವನು ಮಹಿಳೆಯ ಸೋದರಳಿಯ ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ ಆರೋಪಿ ಶಾರುಖ್ ಖಾನ್ ವಿವಾಹಿತನಾಗಿದ್ದು, ಮಹಿಳೆ ಜೊತೆ ಕಳೆದ 3-4 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ. ಇದರ ಮಧ್ಯೆ ಮಹಿಳೆ ಬೇರೆಯವರೊಂದಿಗೆ ಮಾತನಾಡಲು ಆರಂಭಿಸಿದ್ದು, ಇದು ಆರೋಪಿಗೆ ಸರಿ ಹೋಗದ ಕಾರಣ ಆತ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಈಗ ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ ನರ್ಗೀಸ್ (32) ಎಂಬ ವಿಧವೆ ಮತ್ತು ಶಾರುಖ್ ಬಹಳ ದಿನಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ನರ್ಗೀಸ್ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಶಾರುಖ್ ಆಕ್ಷೇಪಿಸಿದ್ದಾನೆ. ನರ್ಗೀಸ್ ಒಪ್ಪದಿದ್ದಾಗ ಸಿಟ್ಟಿಗೆದ್ದ ಆತ ರಾತ್ರಿ ನರ್ಗೀಸ್ ಮನೆಗೆ ಬಂದು ಆಕೆಯನ್ನು ಕೊಂದಿದ್ದಾನೆ. ಮಧ್ಯರಾತ್ರಿ ನಡೆದ ಕೊಲೆ ಸ್ಥಳೀಯರಿಗೆ ಆತಂಕ ಮೂಡಿಸಿತ್ತು. ಕೊಲೆಯಾದ ಸಂದರ್ಭದಲ್ಲಿ ಮೃತೆಯ ಅತ್ತೆ ಕೂಡ ಮನೆಯಲ್ಲಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಡಿಸಿಪಿ ಗ್ರೇಟರ್ ನೋಯ್ಡಾ ಅಶೋಕ್ ಕುಮಾರ್ ಶರ್ಮಾ ಮಾತನಾಡಿ, ‘ಮಹಿಳೆಯ ಹತ್ಯೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿದರು. ಶಾರುಖ್ ಎಂಬ ಯುವಕ ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮೃತರು ಆಕೆಯ ಅತ್ತೆಯಾಗಿದ್ದು, ಶಾರುಖ್ ಈಗಾಗಲೇ ಮದುವೆಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಮೃತರು ಮತ್ತು ಆರೋಪಿ ನಡುವೆ ಪ್ರೇಮ ಸಂಬಂಧವಿತ್ತು’ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular