ಬೆಂಗಳೂರು : ಶೀಘ್ರವೇ ‘ರಾಜ್ಯ ಕೃಷಿ ಅಭಿವೃದ್ದಿ ಏಜೆನ್ಸಿ’ ಸ್ಥಾಪನೆ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಕೃಷಿ ಇಲಾಖೆಯ ಪ್ರಮುಖ ಆಧಾರ ಸ್ತಂಭಗಳಾದ ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ ಪರತಂತ್ರ ಜೀವಿ ಪ್ರಯೋಗಾಲಯಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಯನ್ನು ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಬೀಜೋತ್ಪಾದನೆ, ರೈತ ಸಂಪರ್ಕ, ಕೃಷಿ ತರಬೇತಿ ಹಾಗೂ ಜೈವಿಕ ಪ್ರಯೋಗಾಲಯವನ್ನು ಒಂದೇ ಸೂರಿನಡಿ ತರಲು ರಾಜ್ಯ ಕೃಷಿ ಅಭಿವೃದ್ದಿ ಏಜೆನ್ಸಿ ಸ್ಥಾಪಿಸಲಾಗುವುದು ಎಂದು ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆ ಕುರಿತು ಸಭೆ ಹಮ್ಮಿಕೊಳ್ಳಲಾಯಿತು. ಈ ಏಜೆನ್ಸಿಯು ಕೃಷಿ ಇಲಾಖೆಯ ಪ್ರಮುಖ ಆಧಾರ ಸ್ತಂಭಗಳನ್ನು ಒಂದೇ ಸೂರಿನಡಿ ಅಭಿವೃದ್ಧಿಪಡಿಸಲಿದೆ ಎಂದಿದ್ದಾರೆ.
ಬೀಜೋತ್ಪಾದನೆ, ರೈತ ಸಂಪರ್ಕ, ಕೃಷಿ ತರಬೇತಿ ಹಾಗೂ ಜೈವಿಕ ಪ್ರಯೋಗಾಲಯವನ್ನು ಒಂದೇ ಸೂರಿನಡಿ ತರಲು ರಾಜ್ಯ ಕೃಷಿ ಅಭಿವೃದ್ದಿ ಏಜೆನ್ಸಿ ಸ್ಥಾಪಿಸಲಾಗುವುದು ಎಂದು ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.@CMofKarnataka @siddaramaiah@DKShivakumar @NCheluvarayaS pic.twitter.com/e1BRX58EZ2
— DIPR Karnataka (@KarnatakaVarthe) November 20, 2024