HomeKarnatakaSHOCKING : ಆನ್ ಲೈನ್’ನಲ್ಲಿ ಮನೆಗೆ ಬಂದ 'ಹೇರ್ ಡ್ರೈಯರ್' ಬ್ಲಾಸ್ಟ್ : ಮೃತ ಯೋಧನ...

SHOCKING : ಆನ್ ಲೈನ್’ನಲ್ಲಿ ಮನೆಗೆ ಬಂದ ‘ಹೇರ್ ಡ್ರೈಯರ್’ ಬ್ಲಾಸ್ಟ್ : ಮೃತ ಯೋಧನ ಪತ್ನಿಯ ಎರಡು ಕೈಗಳು ಛಿದ್ರ ಛಿದ್ರ.!

ಬಾಗಲಕೋಟೆ : ಆನ್ ಲೈನ್’ನಲ್ಲಿ ಮನೆಗೆ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಮಹಿಳೆಗೆ ಗಂಭೀರ ಗಾಯಗಳಾದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಲ್ಲಿ ನಡೆದಿದೆ.

ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಅವರ ಕೈಗಳು ಛಿದ್ರ ಛಿದ್ರವಾಗಿದೆ.ಶಶಿಕಲಾ ಎಂಬುವರ ಮನೆಗೆ ಹೇರ್ ಡ್ರೈಯರ್ ಕೊರಿಯರ್ ಮೂಲಕ ಬಂದಿತ್ತು. ಕೊರಿಯರ್ ಸಿಬ್ಬಂದಿ ಶಶಿಕಲಾ ಅವರಿಗೆ ಕರೆ ಮಾಡಿ, “ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ತೆಗೆದುಕೊಳ್ಳಿ” ಎಂದಿದ್ದಾನೆ. ಆದರೆ ಶಶಿಕಲಾ ಊರಲ್ಲಿ ಇರದ ಕಾರಣ ಬಸಮ್ಮಗೆ ಪಾರ್ಸಲ್ ತೆಗೆದುಕೊಳ್ಳಿ ಎಂದು ಶಶಿಕಲಾ ಹೇಳಿದ್ದಾರೆ.

ಪಾರ್ಸಲ್ ತೆಗೆದುಕೊಂಡು ಸುಮ್ಮನೆ ಇದ್ದರೆ ಯಾವುದೇ ಅವಘಡ ನಡೆಯುತ್ತಿರಲಿಲ್ಲ. ಪಾರ್ಸಲ್ ರಿಸೀವ್ ಮಾಡಿದ ಬಸಮ್ಮ ಏನು ಇದೆ ನೋಡೋಣ ಅಂತ ಓಪನ್ ಮಾಡಿದ್ದಾರೆ. ನಂತರ ಬಸಮ್ಮಾ ಅವರು ಹೇರ್ ಡ್ರೈಯರ್ ಸ್ವಿಚ್ ಹಾಕಿ ಆನ್ ಮಾಡಿದಾಗ ಅದು ಸ್ಫೋಟಗೊಂಡಿದೆ. ಹೇರ್ ಡ್ರೈಯರ್ ಸ್ಫೋಟದಿಂದ ಬಸಮ್ಮ ಅವರ ಹಸ್ತಗಳು ಛಿದ್ರಗೊಂಡಿದೆ. ಮಹಿಳೆಯ ಎರಡು ಹಸ್ತಗಳು ಛಿದ್ರ ಛಿದ್ರವಾಗಿದ್ದುಮ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ .

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular