HomeEntertainmentನಾಳೆ ತೆರೆ ಕಾಣಲಿದೆ ನಿಶಾ ರವಿಕೃಷ್ಣನ್ ನಟನೆಯ 'ಅಂಶು'

ನಾಳೆ ತೆರೆ ಕಾಣಲಿದೆ ನಿಶಾ ರವಿಕೃಷ್ಣನ್ ನಟನೆಯ ‘ಅಂಶು’

ಎಂಸಿ ಚನ್ನಕೇಶವ ನಿರ್ದೇಶನದ ನಿಶಾ ರವಿಕೃಷ್ಣನ್ ಅಭಿನಯದ ಬಹು ನಿರೀಕ್ಷಿತ ‘ಅಂಶು’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮಹಿಳಾ ಪ್ರಧಾನ ಕಥಾ ಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ತನ್ನ ಟ್ರೈಲರ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಪ್ರೇಕ್ಷಕರು ತೆರೆ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಈ ಚಿತ್ರವನ್ನು ಗ್ರಹಣ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಸಂಸ್ಥೆ ನಿರ್ಮಾಣ ಮಾಡಿದ್ದು, ಕೆಸಿ ಬಾಲ ಸಾರಂಗನ್  ಸಂಗೀತ ಸಂಯೋಜನೆ ನೀಡಿದ್ದು,  ನಿರ್ದೇಶಕ ಎಂ ಸಿ ಚನ್ನಕೇಶವ ಹಾಗೂ ರಿಕ್ಕಿ ಮಾರ್ಟ್ ಅವರ ಸಂಕಲನ, ಮಹೇಂದ್ರ ಗೌಡ ಸಂಭಾಷಣೆ, ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣವಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular