HomeIndiaBREAKING : ಗುಜರಾತ್ ನಲ್ಲಿ ಭೀಕರ ಅಪಘಾತ : ಟ್ರಕ್’ಗೆ ವ್ಯಾನ್ ಡಿಕ್ಕಿಯಾಗಿ 6 ಮಂದಿ...

BREAKING : ಗುಜರಾತ್ ನಲ್ಲಿ ಭೀಕರ ಅಪಘಾತ : ಟ್ರಕ್’ಗೆ ವ್ಯಾನ್ ಡಿಕ್ಕಿಯಾಗಿ 6 ಮಂದಿ ದುರ್ಮರಣ.!

ಗುಜರಾತ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟ್ರಕ್’ಗೆ ವ್ಯಾನ್ ಡಿಕ್ಕಿಯಾಗಿ 6 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಮಗ್ನಾಡ್ ಗ್ರಾಮದ ಬಳಿ ರಸ್ತೆಯ ಎಡ ಪಥದಲ್ಲಿ ನಿಲ್ಲಿಸಿದ್ದ ಟ್ರಕ್ ಗೆ ಪ್ರಯಾಣಿಕರ ವ್ಯಾನ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಆರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಜಯದೇವ್ ಗೋಹಿಲ್ (23), ಸರಸ್ವತಿ ಗೋಹಿಲ್ (21), ಹನ್ಸಾ ಜಾಧವ್ (35), ಸಂಧ್ಯಾ ಜಾಧವ್ (11), ವಿವೇಕ್ ಗೋಹಿಲ್ (16) ಮತ್ತು ಕೀರ್ತಿ ಗೋಹಿಲ್ (6) ಎಂದು ಗುರುತಿಸಲಾಗಿದೆ.ಘಟನೆಯ ನಂತರ, ಜಂಬುಸರ್ ಪೊಲೀಸರು ಟ್ರಕ್ನ ಅಪರಿಚಿತ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125 (ಮಾನವ ಜೀವವನ್ನು ಅಪಾಯಕ್ಕೆ ತಳ್ಳುವ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯಗಳು) ಮತ್ತು 285 (ಸಾರ್ವಜನಿಕ ಮಾರ್ಗ ಅಥವಾ ನೌಕಾಯಾನ ಮಾರ್ಗದಲ್ಲಿ ಅಪಾಯ ಅಥವಾ ಅಡಚಣೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular