HomeKarnatakaಭಿಕ್ಷಾಟನೆ ಮಾಡುತ್ತಿದ್ದ ಯುವಕನಿಂದ ವೃದ್ಧೆಯ ಮೇಲೆ ಅತ್ಯಾಚಾರ

ಭಿಕ್ಷಾಟನೆ ಮಾಡುತ್ತಿದ್ದ ಯುವಕನಿಂದ ವೃದ್ಧೆಯ ಮೇಲೆ ಅತ್ಯಾಚಾರ

ಕಲಬುರಗಿ: ಭಿಕ್ಷಾಟನೆ ಮಾಡುತ್ತಿದ ಯುವಕನೊಬ್ಬ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ನಡೆದಿದೆ.

ಐನೊಳ್ಳಿ ಗ್ರಾಮದ ಯುವಕ ಫಕೀರ ತಯ್ಯಬ್ ವೃದ್ಧೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಯುವಕ, ವೃದ್ಧೆ ಮೇಲೆ ಅಟ್ಟಾಹಾಸ ಮೆರೆದಿದ್ದಾನೆ. ಆರೋಪಿ ತಯ್ಯಬ್ ಭಿಕ್ಷಾಟನೆಗಾಗಿ ಊರೂರು ಸುತ್ತಾಡುತ್ತಿದ್ದ. ಇದೀಗ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಗಂಭೀರ ಸ್ಥಿತಿಯಲ್ಲಿರುವ ವೃದ್ಧೆಯನ್ನು ಬೀದರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular