ಪಾಟ್ನಾದ ಗಾಂಧಿ ಮೈದಾನದಲ್ಲಿ ‘ಪುಷ್ಪ-2’ ಚಿತ್ರದ ಟ್ರೇಲರ್ ರಿಲೀಸ್ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ‘ಪುಷ್ಪ 2: ದಿ ರೂಲ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಭಾರಿ ಜನಸಮೂಹ ಜಮಾಯಿಸಿತು. ವರದಿಗಳ ಪ್ರಕಾರ, ಭಾರಿ ಜನಸಂದಣಿಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿದರು.
ಟ್ರೈಲರ್ ಬಿಡುಗಡೆ ಪ್ರಾರಂಭವಾಗುವ ಮೊದಲು ಸ್ಥಳದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಭುಗಿಲೆದ್ದಿತು, ಪರಿಸ್ಥಿತಿಯನ್ನು ನಿರ್ವಹಿಸಲು ಪೊಲೀಸರು ಲಘು ಲಾಠಿಚಾರ್ಜ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕೆಲ ಪುಂಡರು ವೇದಿಕೆಯ ಕಡೆಗೆ ಚಪ್ಪಲಿಗಳನ್ನು ಎಸೆದಿದ್ದಾರೆ.
#WATCH | Bihar: Security personnel use baton charge to control the massive crowd that has gathered at Gandhi Maidan in Patna to catch a glimpse of Allu Arjun and Rashmika Mandanna at the trailer launch event of ‘Pushpa 2: The Rule’. pic.twitter.com/5uJ2ljVEWw
— ANI (@ANI) November 17, 2024