ಬೆಂಗಳೂರು: ಡೇಟಿಂಗ್ ಆಪ್ ನಲ್ಲಿ ಪರಿಚಯನಾದ ಯುವಕನೊಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಕೈಕೊಟ್ಟ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತ ಯುವತಿ ನಿಹಾಲ್ ಹುಸೇನ್ ಎಂಬಾತನ ವಿರುದ್ಧ ಮಡಿವಾಣ ಠಣೆಯಲ್ಲಿ ದೂರು ದಖಲಿಸಿದ್ದಾರೆ. ಡೇಟಿಂಗ್ ಆಪ್ ಮೂಲಕ ಪರಿಚಯನಾದ ನಿಹಾಲ್ ಹುಸೇನ್ ಯುವತಿಗೆ ಮದುವೆಯಾಗುವುದಾಗಿ ನಬಿಸಿದ್ದಾನೆ. ಮದುವೆಯಾಗುವುದಾಗಿ ಹೇಳಿ ಯುವತಿಯ ಜೊತೆ ಓಡಾಡಿ, ಪಾರ್ಟಿಗೆಂದು ಕರೆದುಕೊಂಡು ಹೋಗಿ ಜ್ಯೂಸ್ ನಲ್ಲಿ ಮದ್ಯ ಬೆರೆಸಿ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಅಷ್ಟೇ ಅಲ್ಲ, ಯುವತಿ ಗರ್ಭವತಿಯಾಗುತ್ತಿದ್ದಂತೆ ಆಕೆಯ ಮೇಲೆ ಹಲ್ಲೆ ನಡೆಸಿ, ಮೇ ತಿಂಗಳಲ್ಲಿ ಆಕೆಗೆ ಗರ್ಭಪಾತವನ್ನು ಮಾಡಿಸಿದ್ದಾನಂತೆ. ಇದೀಗ ಮದುವೆಯಾಗಲು ನಿರಾಕರಿಸಿ ಮೋಸ ಮಾಡಿದ್ದಾಗಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಪ್ರಕರಣದ ತನಿಖೆ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ 2023ರಲ್ಲಿಯೂ ಮತ್ತೋರ್ವ ಯುವಕನ ವಿರುದ್ಧ ಇದೇ ರೀತಿ ದೂರು ದಾಖಲಿಸಿರುವುದು ತಿಳಿದುಬಂದಿದೆ. ಎರಡು ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.