HomeKarnatakaಆದಾಯ ಮೀರಿ ಆಸ್ತಿ ಗಳಿಸಿದ ಅಧಿಕಾರಿಗೆ ಬಿಗ್ ಶಾಕ್: 3 ವರ್ಷ ಕಠಿಣ ಶಿಕ್ಷೆ, 50...

ಆದಾಯ ಮೀರಿ ಆಸ್ತಿ ಗಳಿಸಿದ ಅಧಿಕಾರಿಗೆ ಬಿಗ್ ಶಾಕ್: 3 ವರ್ಷ ಕಠಿಣ ಶಿಕ್ಷೆ, 50 ಲಕ್ಷ ರೂ. ದಂಡ

ಬೆಂಗಳೂರು: ಬೆಂಗಳೂರು ನಗರ ಜೆ.ಸಿ. ರಸ್ತೆಯ ಡೆಪ್ಯೂಟಿ ಕಮಿಷನ್ ಆಪ್ ಎಕ್ಸ್ಪ್ರೆಸ್ ನಲ್ಲಿ ಅಬಕಾರಿ ಉಪ ನಿರೀಕ್ಷಕರಾಗಿದ್ದ ಎಂ.ರಾಮಚಂದ್ರ ಇವರು ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ನ್ಯಾಯಾಧೀಶ ಸತೀಶ್ ಜೆ.ಬಾಲಿ ಅವರು ಆಪಾದಿತರಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ 50 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳ ಶಿಕ್ಷೆ ವಿಧಿಸಲಾಗುವುದು. ಇವರು ಆರಂಭದಲ್ಲಿ ಇಲಾಖೆಗೆ ಅಬಕಾರಿ ಗಾರ್ಡ್ ಆಗಿ ಸೇವೆಗೆ ಸೇರಿದ್ದು, ಪ್ರಸ್ತುತ ಅವರ ಆಸ್ತಿ 171 ಪಟ್ಟು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಸೋರ್ಸ್ ಮೇರೆಗೆ ಡಿ.ಟಿ.ಶ್ರೀನಿವಾಸ್ ಪೊಲೀಸ್ ಅಧೀಕ್ಷಕರು ಪ್ರಕರಣ ದಾಖಲಿಸಿ, 53 ಸಾಕ್ಷಿದಾರರು ಮತ್ತು 559 ದಾಖಲಾತಿಗಳನ್ನು ಹಾಜರುಪಡಿಸಲಾಗಿತ್ತು.

ಪೊಲೀಸ್ ಅಧೀಕ್ಷಕರ ಆದೇಶದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಡಾ.ಎಸ್.ಪ್ರಕಾಶ್ ಹಾಗೂ ಗೌತಮ್ ತನಿಖೆ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular