ಅಮೆರಿಕಾದ ಮಿಸೌರಿಯ ಡಿಕ್ಸನ್ ಸ್ಕೂಲ್ ಡಿಸ್ಟ್ರಿಕ್ಟ್ನ 30 ವರ್ಷದ ಮಾಜಿ ಶಿಕ್ಷಕಿ ಕ್ಯಾರಿಸ್ಸಾ ಜೇನ್ ಸ್ಮಿತ್ ಳನ್ನು ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ತನ್ನ ಕೃತ್ಯದ ಕುರಿತು ಯಾರ ಮುಂದೆ ಬಾಯಿ ಬಿಡದಂತೆ ಮಾಡಲು ಹಾಗೂ ಲೈಂಗಿಕ ಕ್ರಿಯೆ ನಡೆಸಲು ಈಕೆ ವಿದ್ಯಾರ್ಥಿಗಳಿಗೆ ಹಣ, ಮದ್ಯ ಮತ್ತು ಮಾದಕ ದ್ರವ್ಯಗಳನ್ನು ನೀಡುತ್ತಿದ್ದ ಆರೋಪವನ್ನೂ ಹೊರಿಸಲಾಗಿದೆ.
ಈ ಘಟನೆಗಳು ಆಗಸ್ಟ್ 2023 ಮತ್ತು ಸೆಪ್ಟೆಂಬರ್ 2024 ರ ನಡುವೆ ಸಂಭವಿಸಿವೆ ಎಂದು ಪುಲಾಸ್ಕಿ ಕೌಂಟಿ ಶೆರಿಫ್ ಕಚೇರಿ ಹೇಳಿದೆ. ಈಗಾಗಲೇ ಮದುವೆಯಾಗಿರುವ ಸ್ಮಿತ್, ಲೈಂಗಿಕತೆಯನ್ನು ಹೊಂದಲು ವಿದ್ಯಾರ್ಥಿಗಳನ್ನು ತನ್ನ ಮನೆಗೆ ಮತ್ತು ಇತರ ಸ್ಥಳಗಳಿಗೆ ಆಹ್ವಾನಿಸುತ್ತಿದ್ದಳು ಎಂದು NYpost ವರದಿ ಮಾಡಿದೆ. ಸಂವಹನಕ್ಕಾಗಿ ಈಕೆ ಸ್ನ್ಯಾಪ್ಚಾಟ್ ಅನ್ನು ಬಳಸುತ್ತಿದ್ದು, ತನ್ನ ನಗ್ನ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಕಳಿಸುತ್ತಿದ್ದಳು. ಅಲ್ಲದೇ 100 ಡಾಲರ್ ಅಥವಾ ಗಾಂಜಾವನ್ನು ನೀಡುತ್ತಿದ್ದಳು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಡಿಕ್ಸನ್ ಹೈಸ್ಕೂಲ್ಗೆ ಆಕೆಯ ರಾಜೀನಾಮೆ ಆಗಸ್ಟ್ 2024 ರಲ್ಲಿ ಬಂದಿದ್ದು ಪ್ರಸ್ತುತ, ಆಕೆಯ ಮೇಲೆ ಒಟ್ಟು 19 ಅಪರಾಧಗಳ ಆರೋಪವಿದೆ. ಅತ್ಯಾಚಾರ, ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ, ಲೈಂಗಿಕ ದುರ್ನಡತೆ, ವೇಶ್ಯಾವಾಟಿಕೆಯನ್ನು ಪೋಷಿಸುವ ಮತ್ತು ಮಗುವನ್ನು ಲೈಂಗಿಕವಾಗಿ ಬಳಸಿಕೊಂಡ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ.