HomeKarnatakaನಡೆದು ಹೋಗುತ್ತಿದ್ದವರಿಗೆ ಗುದ್ದಿದ ಕಾರು: ಮಕ್ಕಳನ್ನು ರಕ್ಷಿಸಿ ಪ್ರಾಣ ಬಿಟ್ಟ ತಾಯಿ; ಹಿಟ್ & ರನ್...

ನಡೆದು ಹೋಗುತ್ತಿದ್ದವರಿಗೆ ಗುದ್ದಿದ ಕಾರು: ಮಕ್ಕಳನ್ನು ರಕ್ಷಿಸಿ ಪ್ರಾಣ ಬಿಟ್ಟ ತಾಯಿ; ಹಿಟ್ & ರನ್ ಗೆ ಮಹಿಳೆ ಬಲಿ

ಮೈಸೂರು: ಪತಿ ಹಾಗೂ ಮಕ್ಕಳೊಂದಿಗೆ ರಸ್ತೆ ಬದಿ ನಡೆದು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡಕಲವಂದೆ ಬಳಿ ನಡೆದಿದೆ.

ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ. ಮಂಜುಳಾ (32) ಮೃತ ಮಹಿಳೆ. ಹನುಮನಪುರ ಗ್ರಾಮದ ಲಕ್ಷ್ಮಣ ಎಂಬುವವರ ಪತ್ನಿ. ಲಕ್ಷ್ಮಣ ತನ್ನ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ಬ್ಯಾಂಕ್ ಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ರಸ್ತೆ ಬದಿ ನಿಂತಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬಡಿ ನಡೆದು ಹೋಗುತ್ತಿದ್ದ ಲಕ್ಷ್ಮಣ ಕುಟುಂಬಕ್ಕೆ ಡಿಕ್ಕಿ ಹೊಡೆದು ಹೋಗಿದೆ.

ಮಹಿಳೆ ಮಂಜುಳಾ ತನ್ನ ಮಕ್ಕಳಿಗೆ ಕಾರು ಡಿಕ್ಕಿಹೊಡೆಯುತ್ತದೆ ಎಂದು ಮಕ್ಕಳಿಬ್ಬರನು ಬಚಾವ್ ಮಾಡಲು ಹೋಗಿ ಕಾರಿನ ಚಕ್ರಕ್ಕೆ ಸಿಲುಕಿದ್ದಾರೆ. ಮಂಜುಳಾ ಹೊಟ್ಟೆಯ ಮೇಲೆ ಕಾರು ಹರಿದು ಹೋಗಿದೆ. ಸ್ಥಳದಲ್ಲೇ ಮಂಜುಳಾ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ರಸ್ತೆ ಬದಿ ಹೋಗುತಿದ್ದ ರಾಚಪ್ಪ ಎಂಬುವವರಿಗೆ ಗಾಯಗಳಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಪಘಾತದ ಬಳಿಕ ಕಾರು ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ.

 

For Latest News Updates, Join Our Whatsapp Community🚩
RELATED ARTICLES

Most Popular