HomeEntertainment'ಸಂಜು ವೆಡ್ಸ್ ಗೀತಾ2' ಚಿತ್ರದ ಮೆಲೋಡಿ ಹಾಡು ರಿಲೀಸ್

‘ಸಂಜು ವೆಡ್ಸ್ ಗೀತಾ2’ ಚಿತ್ರದ ಮೆಲೋಡಿ ಹಾಡು ರಿಲೀಸ್

2011 ರಲ್ಲಿ ತೆರೆ ಕಂಡಿದ್ದ ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಸ್ಯಾಂಡಲ್ವುಡ್ ನಲ್ಲಿ ಹೊಸ ದಾಖಲೆ ಬರೆದಿತ್ತು. ಶ್ರೀನಗರ ಕಿಟ್ಟಿ ಹಾಗೂ ಮೋಹಕ ತಾರೆ ರಮ್ಯ ನಟನೆಗೆ ಸಿನಿ ಪ್ರಿಯರು ಫಿದಾ ಆಗಿದ್ದರು. ಈ ಚಿತ್ರದ  ಹಾಡುಗಳಂತೂ ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಲೇ ಇವೆ.  ಇದೀಗ ಇದರ ಮುಂದುವರೆದ ಭಾಗ ‘ಸಂಜು ವೆಡ್ಸ್ ಗೀತಾ2’ ತೆರೆ ಮೇಲೆ ಬರಲು ಸಜ್ಜಾಗಿದೆ.

‘ಸಂಜು ವೆಡ್ಸ್ ಗೀತಾ2’ ಚಿತ್ರದ  ಮೆಲೋಡಿ ಹಾಡೊಂದು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ಅವನು ಸಂಜು ಅವಳು ಗೀತಾ’ ಎಂಬ ಈ ಹಾಡಿಗೆ ಸೋನು ನಿಗಮ್ ಹಾಗೂ ಸಂಗೀತ ರವೀಂದ್ರನಾಥ್ ಧ್ವನಿಯಾಗಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಕವಿರಾಜ್ ಅವರ ಸಾಹಿತ್ಯವಿದೆ.

ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ  ಕಾಣಿಸಿಕೊಂಡಿದ್ದು, ನಾಗಶೇಖರ್ ಮೂವೀಸ್ ಪ್ರೊಡಕ್ಷನ್ ಹಾಗೂ ಮಹಾನದಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಚಲವಾದಿ ಕುಮಾರ್, ಮಾಪಿ ನಾರಾಯಣ್, ನಿರ್ಮಾಣ ಮಾಡಿದ್ದಾರೆ. ಆಂಥೋನಿ ಸಂಕಲನ, ಸತ್ಯ ಹೆಗಡೆ ಛಾಯಾಗ್ರಹಣ, ಮತ್ತು ಭಜರಂಗಿ ಮೋಹನ್ ನೃತ್ಯ ನಿರ್ದೇಶನವಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular