HomeKarnatakaಚೀಟಿ ಕಟ್ಟಿದವರಿಗೆ ಬಿಗ್ ಶಾಕ್: 7 ಕೋಟಿ ರೂ. ವಂಚಿಸಿ ಮಹಿಳೆ ಪರಾರಿ

ಚೀಟಿ ಕಟ್ಟಿದವರಿಗೆ ಬಿಗ್ ಶಾಕ್: 7 ಕೋಟಿ ರೂ. ವಂಚಿಸಿ ಮಹಿಳೆ ಪರಾರಿ

ದೊಡ್ಡಬಳ್ಳಾಪುರ:  ಚೀಟಿ ವ್ಯವಹಾರ ನಡೆಸುತ್ತಿದ್ದ ಮಹಿಳೆ 7 ಕೋಟಿ ರೂಪಾಯಿ ಇಡುಗಂಟಿನೊಂದಿಗೆ ಪರಾರಿಯಾದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಮುಕ್ತಾಂಬಿಕಾ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪುಷ್ಪಕಲಾ ಎಂಬಾಕೆ ವಿರುದ್ಧ ಮೋಸ ಹೋದ ಜನ ದೂರು ಸಲ್ಲಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ನಿಯಮಿತವಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದ ಪುಷ್ಪಲತಾ ಅವರನ್ನು ನಂಬಿದ ಅನೇಕರು ಚೀಟಿ ಕಟ್ಟಿದ್ದಾರೆ.

ಮದುವೆ, ಮನೆ ನಿರ್ಮಾಣ ಸೇರಿ ಇತರೆ ವ್ಯವಹಾರಕ್ಕೆ 250ಕ್ಕೂ ಹೆಚ್ಚು ಮಂದಿ ಚೀಟಿಯಲ್ಲಿ ಹಣ ಹಾಕಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಹಣದ ಸಮೇತ ಅಕ್ಟೋಬರ್ 27ರಂದು ಮನೆಯಿಂದ ನಾಪತ್ತೆಯಾಗಿದ್ದಾಳೆ. ವಂಚನೆಗೊಳಗಾದವರು ದೂರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular