ಶಿವಮೊಗ್ಗ: ಚಿರತೆ ಉಗುರು ಹಾಗೂ ಹಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಅರಣ್ಯ ಸಂಚಾರಿ ದಳ ಬಂಧಿಸಿದೆ.
ಲೋಕೇಶ್ ಬಂಧಿತ ಆರೋಪಿ. ಕಾರ್ಯಾಚರಣೆ ವೇಳೆ ಲೋಕೇಶ್ ಬಳಿ ಚಿರತೆ ಉಗುರು, ಹಲ್ಲುಗಳು ಪತ್ತೆಯಾಗಿವೆ.
ಬಂಧಿತನಿಂದ 16 ಚಿರತೆ ಉಗುರು, 3 ಚಿರತೆ ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.