ತಲೆಗೆ ಗುಂಡು ಹಾರಿಸಿಕೊಂಡು ಎಎಸ್ಐ ಆತ್ಮಹತ್ಯೆ

ಬಿಹಾರದ ಪಾಟ್ನಾದಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್(ASI) ಶುಕ್ರವಾರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಂಧಿ ಮೈದಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಏಕತಾ ಭವನದಲ್ಲಿರುವ ಟ್ರಾಫಿಕ್ ಆಪರೇಷನ್ ಆಫೀಸ್‌ನ ಬ್ಯಾರಕ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಕೇಂದ್ರೀಯ ಎಸ್ಪಿ ಸ್ವೀಟಿ ಸಹರಾವತ್ ಮತ್ತು ವಿಧಿ ವಿಜ್ಞಾನ ತಂಡವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಳ್ಳಲಾಗಿದೆ.

ಮೃತ ಎಎಸ್‌ಐ ಬಿಹಾರದ ಭೋಜ್‌ಪುರ ಜಿಲ್ಲೆಯ ತರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬದ್ಕಗಾಂವ್ ಗ್ರಾಮದ ನಿವಾಸಿ ಅಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಪೊಲೀಸ್ ಲೈನ್‌ನಲ್ಲಿ ನೆಲೆಸಿದ್ದರು. ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು.

ಘಟನೆಯ ಕುರಿತು ಗಾಂಧಿ ಮೈದಾನ ಪೊಲೀಸರು ಮತ್ತು ಫೊರೆನ್ಸಿಕ್ ತಂಡಗಳು ತನಿಖೆ ನಡೆಸುತ್ತಿವೆ. ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಸಾಧ್ಯವಿರುವ ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಎಸ್ಪಿ ತಿಳಿಸಿದ್ದಾರೆ.

ಅಜಿತ್ ಅವರ ತಂದೆ ವಿನೋದ್ ಸಿಂಗ್, ಅವರು ದೀಪಾವಳಿಗೆ ಮನೆಗೆ ಬರುವಂತೆ ಅವರು ಆಹ್ವಾನಿಸಿದ್ದರು, ಆದರೆ  ರಜೆ ಕೊಟ್ಟರೆ ಮಾತ್ರ ಬರಲು ಸಾಧ್ಯ ಎಂದು ಉತ್ತರಿಸಿದ್ದರು.

ಅಜಿತ್ ಸಿಂಗ್ 2007 ರಲ್ಲಿ ಬಿಹಾರ ಪೊಲೀಸ್ ಪೇದೆಯಾಗಿ ಸೇರಿದ್ದರು ಮತ್ತು ನಾಲ್ಕು ತಿಂಗಳ ಹಿಂದೆಯಷ್ಟೇ ಬಡ್ತಿ ಪಡೆದಿದ್ದರು. ಅವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪಾಟ್ನಾದಲ್ಲಿ ಪೋಸ್ಟಿಂಗ್ ಮಾಡುವ ಮೊದಲು ಅವರು ಭಭುವಾದಲ್ಲಿ ನೆಲೆಸಿದ್ದರು.

ಅವರ ಸಹೋದರರಲ್ಲಿ ಒಬ್ಬರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಇನ್ನೊಬ್ಬರು ಸ್ಥಳೀಯ ಉದ್ಯಮಿ, ಮತ್ತು ಮೂರನೆಯವರು ರೈಲ್ವೆಯಲ್ಲಿ ಲೋಕೋ ಪೈಲಟ್ ಆಗಿ ಕೆಲಸ ಮಾಡುತ್ತಾರೆ.

ರಜೆ ನಿರಾಕರಿಸಿದ್ದರಿಂದ ಅಜಿತ್ ಸಿಂಗ್ ಅವರಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬುದು ಸೇರಿ ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ, ವಿಧಿವಿಜ್ಞಾನ ತಂಡವೂ ತನಿಖೆ ನಡೆಸುತ್ತಿದೆ ಎಸ್ಪಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read