HomeKarnatakaನ್ಯಾಮತಿ ಎಸ್.ಬಿ.ಐ.ನಲ್ಲಿ ದೋಚಿದ್ದು ಬರೋಬ್ಬರಿ 17 ಕೆಜಿ ಚಿನ್ನಾಭರಣ

ನ್ಯಾಮತಿ ಎಸ್.ಬಿ.ಐ.ನಲ್ಲಿ ದೋಚಿದ್ದು ಬರೋಬ್ಬರಿ 17 ಕೆಜಿ ಚಿನ್ನಾಭರಣ

ದಾವಣಗೆರೆ: ದಾವಣಗೆರೆ ಜಿಲ್ಲೆ ನ್ಯಾಮತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಶಾಖೆಯಲ್ಲಿ ಕಳ್ಳರು ಕಿಟಕಿ ಮೂಲಕ ಕನ್ನ ಹಾಕಿ ಬರೋಬ್ಬರಿ 12.95 ಕೋಟಿ ರೂಪಾಯಿ ಮೌಲ್ಯದ 17 ಕೆಜಿ ಚಿನ್ನಾಭರಣ ದೋಚಿದ್ದಾರೆ. ಭಾನುವಾರ ರಾತ್ರಿ ನಡೆದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಕಳ್ಳರು ಪತ್ತೆಗೆ ಪೊಲೀಸರು 5 ತಂಡ ರಚಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಬ್ಯಾಂಕಿಗೆ ರಜೆ ಇದ್ದ ಕಾರಣ ದರೋಡೆ ನಡೆಸಲಾಗಿದೆ. ಕಳ್ಳರು ಅಕ್ಕಪಕ್ಕದಲ್ಲಿ ಮನೆಗಳು ಇಲ್ಲದ ಬ್ಯಾಂಕ್ ಶಾಖೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬ್ಯಾಂಕ್ ನಲ್ಲಿದ್ದ ಮೂರು ಲಾಕರ್ ಗಳ ಪೈಕಿ ಒಂದು ಲಾಕರ್ ಮಾತ್ರ ತೆರೆಯಲು ಸಾಧ್ಯವಾಗಿದ್ದು, ಅದರಲ್ಲಿದ್ದ 12.95 ಕೋಟಿ ರೂಪಾಯಿ ಮೌಲ್ಯದ 17.25 ಕೆಜಿ ಚಿನ್ನಾಭರಣ, 30 ಲಕ್ಷ ರೂಪಾಯಿ ನಗದು ದೋಚಲಾಗಿದೆ. ಬ್ಯಾಂಕಿನ ಇನ್ನೆರಡು ಲಾಕರ್ ಗಳ ಬೀಗ ಮುರಿಯುವ ಪ್ರಯತ್ನ ಮಾಡಿದ್ದಾರೆ. ಕಳ್ಳರು ಬ್ಯಾಂಕಿನ ಸೈರನ್ ಕಿತ್ತು ಹಾಕಿದ್ದಾರೆ. ಸಿಸಿಟಿವಿ ಕ್ಯಾಮರಾದ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಸುನಿಲ್ ಕುಮಾರ್ ಯಾದವ್ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular