ಬೆಂಗಳೂರು : ಬೆಂಗಳೂರಿನಲ್ಲಿ ಮೊದಲ ಪಟಾಕಿ ಅವಘಡ ಸಂಭವಿಸಿದ್ದು, ಪಟಾಕಿ ಸಿಡಿದು 18 ವರ್ಷದ ಯುವಕನಿಗೆ ಗಾಯಗಳಾಗಿದೆ.
ಬೆಂಗಳೂರಿನ ಕಮ್ಮಲಹಳ್ಳಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಪಟಾಕಿ ಸಿಡಿಸುವಾಗ ಯುವಕನ ಕಣ್ಣಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಿನದ 24 ಗಂಟೆಯೂ ಸೇವೆ ಒದಗಿಸುತ್ತಿದೆ.
ಪಟಾಕಿಯಿಂದ ಗಾಯಗೊಂಡು ಬರುವವರಿಗೆ ಮಿಂಟೋ ಆಸ್ಪತ್ರೆ ಪ್ರತ್ಯೇಕ ವಾರ್ಡ್ ಸಿದ್ದಪಡಿಸಿದೆ. ಹಾಗೂ ಇದಕ್ಕೆ ಬೇಕಾದ ಐ ಡ್ರಾಪ್ ಸೇರಿ ವಿವಿಧ ಔಷಧಿಗಳನ್ನು ತರಿಸಿಕೊಂಡಿದೆ. ವೈದ್ಯರಿಗೆ ರಜೆ ತೆಗೆದುಕೊಳ್ಳದಂತೆ ಆಸ್ಪತ್ರೆ ಸೂಚನೆ ನೀಡಿದೆ.