ಹೊಲದಲ್ಲಿ ಮಲಗಿದ್ದ ಮಹಿಳೆ ದೇಹದ ನಾಗರಹಾವೊಂದು ಹೆಡೆ ಎತ್ತಿ ನಿಂತಿದ್ದು, ವಿಡಿಯೋ ವೈರಲ್ ಆಗಿದೆ.
ಆರು ಅಡಿ ಉದ್ದದ ನಾಗರಹಾವು ಮಹಿಳೆಯ ದೇಹದ ಮೇಲೆ ಹತ್ತಿತು.. ನಿದ್ದೆಯಲ್ಲಿದ್ದ ಮಹಿಳೆ ಎಚ್ಚರಗೊಂಡಾಗ ಆಕೆಯೇ ಜೀವವೇ ಬಾಯಿಗೆ ಬಂದಂತಾಗಿದೆ. ಆದರೆ ಕೊಂಚ ಕೂಡ ವಿಚಲಿತಳಾಗದೇ ದೇವರ ಬಗ್ಗೆ ಯೋಚಿಸುತ್ತಾ ಮಿಸುಕಾಡದೇ ಮಲಗಿದರು. ಉಸಿರು ಬಿಗಿಹಿಡಿದು ತನ್ನನ್ನು ಉಳಿಸುವಂತೆ ಮಲ್ಲಯ್ಯನನ್ನು ಬೇಡಿಕೊಂಡಳು. ಈ ಘಟನೆ ಕರ್ನಾಟಕದ ಕಲಬುರಗಿಯಲ್ಲಿ ಆಗಸ್ಟ್ 2022 ರಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಮಲ್ಲಾಬಾದ್ ನಲ್ಲಿ ಹೊಲದಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಮಹಿಳೆ ಮೇಲೆ ಹಾವು ಹತ್ತಿದೆ. ಮಹಿಳೆ ಉಸಿರು ಬಿಗಿಹಿಡಿದು ಮಲ್ಲಣ್ಣನನ್ನು ಪ್ರಾರ್ಥಿಸಿದಳು. ಅದೃಷ್ಟವಶಾತ್, ನಾಗರಹಾವು ಯಾವುದೇ ಹಾನಿ ಮಾಡದೆ ಹೊರಟುಹೋಯಿತು. ಈ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ನಂತರ ಭಾರಿ ವೈರಲ್ ಆಗಿದೆ.
When this happens, what would be your reaction??
For information, the snake moved away after few minutes without out causing any harm…
(As received from a colleague) pic.twitter.com/N9OHY3AFqA— Susanta Nanda IFS (Retd) (@susantananda3) August 28, 2022

