HomeIndiaBIG NEWS: ಸಂವಿಧಾನ ಅಂಗೀಕರಿಸಿ 75 ವರ್ಷ ಹಿನ್ನೆಲೆ ನ. 26 ಸಂಸತ್ ಜಂಟಿ ಅಧಿವೇಶನ

BIG NEWS: ಸಂವಿಧಾನ ಅಂಗೀಕರಿಸಿ 75 ವರ್ಷ ಹಿನ್ನೆಲೆ ನ. 26 ಸಂಸತ್ ಜಂಟಿ ಅಧಿವೇಶನ

ನವದೆಹಲಿ: ಸಂವಿಧಾನ ಅಂಗೀಕರಿಸಿ ನವೆಂಬರ್ 26ಕ್ಕೆ 75 ವರ್ಷ ತುಂಬಲಿದ್ದು, ಅದೇ ದಿನದಂದು 75ನೇ ವರ್ಷಾಚರಣೆ ಅಂಗವಾಗಿ ಸಂಸತ್ತಿನ ಜಂಟಿ ಅಧಿವೇಶನ ನಡೆಸಲಾಗುವುದು.

ಸಂಸತ್ತಿನ ಸಂವಿಧಾನ ಸದನದ ಸಭಾಂಗಣದಲ್ಲಿ ಅಧಿವೇಶನ ನಡೆಯಲಿದೆ. 1949ರ ನವೆಂಬರ್ 26ರಂದು ಅಂದಿನ ಸಂಸತ್ ಇದೇ ಸಭಾಂಗಣದಲ್ಲಿ ಸಂವಿಧಾನವನ್ನು ಅಂಗೀಕರಿಸಿತ್ತು. ನವೆಂಬರ್ 26ರಂದು ಪ್ರತಿ ವರ್ಷ ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು.

ಆದರೆ, 2015ರ ಡಾ. ಬಿಆರ್ ಅಂಬೇಡ್ಕರ್ ಅವರ 125ನೇ ಜಯಂತಿ ಸಂದರ್ಭದಲ್ಲಿ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂತೆಯೇ ನ. 26ರಂದು ಸಂವಿಧಾನ ಅಂಗೀಕರಿಸಿ 75 ವರ್ಷವಾದ ಹಿನ್ನಲೆಯಲ್ಲಿ ಸಂಸತ್ ಜಂಟಿ ಅಧಿವೇಶನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂವಿಧಾನದ 75 ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 26 ರಂದು ಸರ್ಕಾರವು ಸಂಸತ್ತಿನ ಉಭಯ ಸದನಗಳ ವಿಶೇಷ ಜಂಟಿ ಅಧಿವೇಶನವನ್ನು ನಡೆಸುವ ಸಾಧ್ಯತೆಯಿದೆ. ಚಳಿಗಾಲದ ಅಧಿವೇಶನವು ನವೆಂಬರ್ 25 ರಿಂದ ಪ್ರಾರಂಭವಾಗಬಹುದು ಮತ್ತು ವಿಶೇಷ ಜಂಟಿ ಅಧಿವೇಶನವು 1949 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ಸಂವಿಧಾನ್ ಸದನ್(ಹಳೆಯ ಸಂಸತ್ತಿನ ಕಟ್ಟಡ) ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular