alex Certify ಪತ್ನಿ ಚುಡಾಯಿಸಿದ್ದಕ್ಕೆ ಯುವಕನನ್ನು ಇರಿದು ಕೊಂದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಚುಡಾಯಿಸಿದ್ದಕ್ಕೆ ಯುವಕನನ್ನು ಇರಿದು ಕೊಂದ ಪತಿ

ಕೋಲಾರ: ಪದೇ ಪದೇ ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಪತಿಯೊಬ್ಬ ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಜಮಾಲ್ ಷಾ ನಗರದಲ್ಲಿ ನಡೆದಿದೆ.

25 ವರ್ಷದ ರೋಹಿದ್ ಅಲಿಯಾಸ್ ಅರ್ಬಾಜ್ ಕೊಲೆಯಾದ ಯುವಕ. ಅಮ್ಜದ್ ಕೊಲೆ ಮಾಡಿರುವ ಆರೋಪಿ. ರೋಹಿದ್ ಅಲಿಯಾಸ್ ಅರ್ಬಾಜ್ ಕೆಲ ದಿನಗಳಿಂದ ಅಮ್ಜದ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ. ಇದೇ ವಿಚಾರವಾಗಿ ರೋಹಿದ್ ಗೆ ಅಮ್ಜಾದ್ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದ. ಆದರೆ ತನ್ನ ಹಳೇ ಚಾಳಿ ಮುಂದುವರೆಸಿದ್ದ ರೋಹಿದ್ ನನ್ನು ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ.

ರೋಹಿದ್ ನ ಎದೆಗೆ ಚಾಕುವಿನಿಂದ ಇರಿದು ಅಮ್ಜಾದ್ ಕೊಲೆಗೈದಿದ್ದು, ಆರೋಪಿಯನ್ನು ಕೋಲಾರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...