ಬೆಂಗಳೂರಿನಲ್ಲಿ ಮಳೆ ದೊಡ್ಡ ಅವಾಂತರ ಸೃಷ್ಟಿಸಿದೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಾಗಿ ಪರಿಣಮಿಸಿದೆ.ವಿಕಲಚೇತನ ಮಹಿಳೆಯೊಬ್ಬರು ಬೈಕ್ ಸಮೇತ ಗುಂಡಿಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಡಿಎಸ್ ಕಿಡಿ
ದುಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮುಳುಗಿದ್ದು ಕೆರೆಯಾಗಿ ಮಾರ್ಪಟ್ಟಿದೆ. ರಾಜಧಾನಿಯ ರಸ್ತೆಗಳೆಲ್ಲ ನೀರು ತುಂಬಿಕೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಹಲವು ಬಡಾವಣೆಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳ ಪರದಾಡುತ್ತಿದ್ದಾರೆ.
ಬ್ರಾಂಡ್ ಬೆಂಗಳೂರಿಗೆ ಸ್ವಾಗತ! ವಿಕಲಚೇತನ ಮಹಿಳೆ ಗುಂಡಿಗೆ ಬಿದ್ದಿದ್ದಾರೆ. ಡಿಕೆಶಿ ಅವರ ‘ದೂರದೃಷ್ಟಿಯ’ ಆಡಳಿತಕ್ಕಾಗಿ ಬೆನ್ನು ತಟ್ಟಿಕೊಳ್ಳುತ್ತಲೇ ಇರುವ ನಗರದ ಮೂಲಸೌಕರ್ಯಗಳು ಕುಸಿಯುತ್ತಿದೆ . ರಸ್ತೆಗಳನ್ನು ಸಾವಿನ ಬಲೆಗಳನ್ನಾಗಿ ಪರಿವರ್ತಿಸುವಲ್ಲಿ ಬಿಬಿಎಂಪಿಯ ಪಾಂಡಿತ್ಯಕ್ಕೆ ಸಾಟಿಯಿಲ್ಲ. ನಮ್ಮ ಹೆಮ್ಮೆಯ ನಗರವನ್ನು ಇಟಲಿಯ ವೆನಿಸ್ ಮಾಡಿ ಕೃತಾರ್ಥರಾಗಿದ್ದಾರೆ. •ಭಾರತದ ಸಿಲಿಕಾನ್ ವ್ಯಾಲಿ, ಉದ್ಯಾನನಗರಿಯಾಗಿದ್ದ ಬೆಂಗಳೂರಿನ ಕೆರೆಗಳನ್ನು ಒಂದಾದ ಮೇಲೆ ಒಂದರಂತೆ ನುಂಗಿದ ಪರಿಣಾಮ ಬೆಂಗಳೂರಿಗೆ ಬೆಂಗಳೂರೇ ಕೆರೆಯಾಗಿಬಿಟ್ಟಿದೆ!!ಎಂದು ಜೆಡಿಎಸ್ ಕಿಡಿಕಾರಿದೆ.
Welcome to *Brand Bengaluru*! Where a physically challenged woman falling into a pothole during heavy rains is just another day in paradise. While @siddaramaiah & @DKShivakumar keep patting themselves on the back for their ‘visionary’ governance, the city's crumbling… pic.twitter.com/qoVebti6Fd
— Janata Dal Secular (@JanataDal_S) October 22, 2024
•ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಮಾಡುವೆ ಎಂದಿದ್ದ ಗಿರಾಕಿ @DKShivakumar
ನಮ್ಮ ಹೆಮ್ಮೆಯ ನಗರವನ್ನು ಇಟಲಿಯ ವೆನಿಸ್ ಮಾಡಿ ಕೃತಾರ್ಥರಾಗಿದ್ದಾರೆ.
•ಭಾರತದ ಸಿಲಿಕಾನ್ ವ್ಯಾಲಿ, ಉದ್ಯಾನನಗರಿಯಾಗಿದ್ದ ಬೆಂಗಳೂರಿನ ಕೆರೆಗಳನ್ನು ಒಂದಾದ ಮೇಲೆ ಒಂದರಂತೆ ನುಂಗಿದ ಪರಿಣಾಮ ಬೆಂಗಳೂರಿಗೆ ಬೆಂಗಳೂರೇ ಕೆರೆಯಾಗಿಬಿಟ್ಟಿದೆ!!… pic.twitter.com/XTg0BRRVVA— Janata Dal Secular (@JanataDal_S) October 22, 2024

