HomeKarnatakaBREAKING: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 6 ವಿಮಾನಗಳಲ್ಲಿ 12 ಬಾಂಬರ್ ಗಳಿರುವುದಾಗಿ...

BREAKING: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 6 ವಿಮಾನಗಳಲ್ಲಿ 12 ಬಾಂಬರ್ ಗಳಿರುವುದಾಗಿ ಬೆದರಿಕೆ ಸಂದೇಶ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಏರ್ ಪೋರ್ಟ್ ನ ಕಮಾಂಡ್ ಸೆಂಟರ್ ಗೆ ಬೆದರಿಕೆ ಸಂದೇಶ ರವಾನಿಸಲಾಗಿದೆ.

ಅನಾಮಧೇಯ ಟ್ವೀಟ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ವಿವಿಧ ಏರ್ ಪೋರ್ಟ್ ಗಳಿಂದ ತೆರಳಿರುವ 6 ವಿಮಾನಗಳಲ್ಲಿ ಬಾಂಬ್ ಇಡಲಾಗಿದ್ದು, ಒಟ್ಟು 12 ಬಾಂಬರ್ ಗಳು ವಿಮಾನದಲ್ಲಿ ಇರುವುದಾಗಿ ಸಂದೇಶ ರವಾನಿಸಲಾಗಿದೆ.

ಮಂಗಳೂರು-ದುಬೈ, ತಿರುವನಂತಪುರಂ-ಮಸ್ಕಟ್ ವಿಮಾನ ಸೇರಿದಂತೆ 6 ವಿಮಾನಗಳಲ್ಲಿ ಇಬ್ಬರು ಬಾಂಬರ್ ಗಳಂತೆ ಒಟ್ಟು 12 ಬಾಂಬರ್ ಗಳು ಇದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಡಿಗೋ ಏರ್ ಲೈನ್ಸ್ ನ IX233, IX 375, IX 383, IX 549, IX 399 ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಅಮಾನಧೇಯ ಟ್ವೀಟ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ಬಾಂಬ್ ಬೆದರಿಕೆ ಸಂದೇಶ ಬೆನ್ನಲ್ಲೇ ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular