HomeKarnatakaBIG NEWS: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ದರ್ಶನ್: ಜೈಲಿನಲ್ಲಿ ಪರದಾಟ

BIG NEWS: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ದರ್ಶನ್: ಜೈಲಿನಲ್ಲಿ ಪರದಾಟ

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಒಂದೆಡೆ ಜಾಮೀನಿಗಾಗಿ ಪರದಾಟ ನಡೆಸಿದ್ದರೆ, ಮತ್ತೊಂದೆಡೆ ಬೆನ್ನು ನೋವಿನಿಂದ ಒದ್ದಾಡುತ್ತಿದ್ದಾರೆ.

ಕೊಲೆ ಆರೋಪಿ ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲಿನಲ್ಲಿ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು, ನಿಲ್ಲುವುದಕ್ಕೂ ಆಗದೇ, ನಡೆಯುವುದಕ್ಕೂ ಆಗದೇ ನರಳಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬೆನ್ನುನೋವಿನಿಂದಾಗಿ ಹೈಸೆಕ್ಯೂರಿಟಿ ಸೆಲ್ ನಿಂದ ಜೈಲು ಸಂದರ್ಶಕರ ಕೊಠಡಿಗೆ ಬರಲು ದರ್ಶನ್ ಒದ್ದಾಡಿದ್ದಾರೆ. ಅ.19ರಂದು ವಕೀಲ ರಾಮ್ ಸಿಂಗ್ ಜೈಲಿಗೆ ಬಂದಿದ್ದ ಹಿನ್ನೆಲೆಯಲ್ಲಿ ಭೇಟಿಗೆ ಬಂದಿದ್ದ ದರ್ಶನ್ ನಡೆಯುವಾಗ ಪದೇ ಪದೇ ಬೆನ್ನು ಹಿಡಿದುಕೊಳ್ಳುತ್ತಿದ್ದರು. ಗೋಡೆ ಆಸರೆ ಪಡೆದು ಹೈಸೆಕ್ಯೂರಿಟಿ ಸೆಲ್ ಮುಂದೆ ನಿಂತಿದ್ದರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೊಂದೆಡೆ ಪತ್ನಿ ವಿಜಯಲಕ್ಷ್ಮೀ ಮನವೊಲಿಕೆ ಬಳಿಕ ದರ್ಶನ್, ಜೈಲಿನಲ್ಲಿಯೇ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಒಪ್ಪಿದ್ದಾಗಿ ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular