ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮುಸ್ಲಿಂ ಪ್ರಾಬಲ್ಯದ ಪ್ರದೇಶವಾದ ರೆವರಿಟಾಲಾಬ್‌ನಲ್ಲಿ ವ್ಯಕ್ತಿಯೊಬ್ಬರು ಗುರುವಾರ ತಡರಾತ್ರಿ ಜನರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ದಾಳಿಯ ರೀತಿ ಬೆಚ್ಚಿಬೀಳಿಸಿದೆ.
ಆರೋಪಿಯನ್ನು ಪ್ರಕಾಶ್ ಮಾಂಝಿ ಎಂದು ಗುರುತಿಸಲಾಗಿದ್ದು, ಆತ ನೇಪಾಳ ಮೂಲದವನೆಂದು ವರದಿಯಾಗಿದೆ. ವರದಿಗಳ ಪ್ರಕಾರ ಮಾಂಝಿ ಮೋಟಾರು ಸೈಕಲ್‌ನಲ್ಲಿ ರೆವರಿಟಾಲಾಬ್‌ಗೆ ಬಂದಿದ್ದ. ದ್ವೇಷ ಬಿತ್ತುವ ಪ್ರಚೋದನಕಾರಿ ಮಾತುಗಳ ಮೂಲಕ ಸ್ಥಳೀಯರನ್ನು ಪ್ರಚೋದಿಸಲು ಪ್ರಾರಂಭಿಸಿದ. ಅವನ ಮಾತುಗಳಿಗೆ ಜನ ಆಕ್ಷೇಪಿಸಿದಾಗ ಆತ ಕೊಡಲಿಯಿಂದ ಜನರ ಮೇಲೆ ಏಕಾಏಕಿ ಹಲ್ಲೆಗೆ ಮುಂದಾದ. ಬೈಕ್ ನಲ್ಲಿ ಹೋಗುತ್ತಿದ್ದವರ ಮೇಲೂ ಹಲ್ಲೆ ನಡೆಸಿದ್ದಾನೆ. ಘಟನೆಯ ಗೊಂದಲದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು ಕಳವಳ ಮೂಡಿಸಿದೆ. ಪೊಲೀಸರ ಪ್ರಕಾರ, ದಾಳಿಯಲ್ಲಿ ಹಲವಾರು ವ್ಯಕ್ತಿಗಳಿಗೆ ಗಾಯಗಳಾಗಿವೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇಬ್ಬರು ಪ್ರಸ್ತುತ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕಾಶ್ ಮಾಂಜಿ ಯನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆತನ ವಿರುದ್ಧ ಅಧಿಕೃತ ದೂರು ದಾಖಲಿಸಲಾಗಿದೆ.
https://twitter.com/Voice_OfMuslim/status/1847097812686606668?ref_src=twsrc%5Etfw%7Ctwcamp%5Etweetembed%7Ctwterm%5E1847097812686606668%7Ctwgr%5E50fa81a94e7eb0960499e33df2f1647d73a7a9c1%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fvaranasishockernepalimanambushespeopleattacksthemwithspadeonroadarrestedafterhorrifyingvideosurfaces-newsid-n635544921
https://twitter.com/VnsDcp/status/1846951762739028415?ref_src=twsrc%5Etfw%7Ctwcamp%5Etweetembed%7Ctwterm%5E1846951762739028415%7Ctwgr%5E50fa81a94e7eb0960499e33df2f1647d73a7a9c1%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fvaranasishockernepalimanambushespeopleattacksthemwithspadeonroadarrestedafterhorrifyingvideosurfaces-newsid-n635544921